News Karnataka Kannada
Monday, April 29 2024
ಕ್ರೈಮ್

6 ವರ್ಷದ ಬಾಲಕಿಯ ಮೇಲೆ 11 ವರ್ಷದ ಬಾಲಕನಿಂದ ಅತ್ಯಾಚಾರ

ಅಶೋಕನಗರ  ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪಾನಿಪುರಿ ಕೊಡಿಸುತ್ತೇನೆ ಎಂದು ಕರೆದುಕೊಂಡು ಹೋಗಿ 7 ವರ್ಷದ ಬಾಲಕಿ ಮೇಲೆ ವ್ಯಕ್ತಿಯೋರ್ವ ಅತ್ಯಾಚಾರ  ಎಸಗಿದ ಘಟನೆ  ನಡೆದಿದೆ.
Photo Credit : NewsKarnataka

ಆಗ್ರಾ: ಉತ್ತರ ಪ್ರದೇಶದ ಆಗ್ರಾದಲ್ಲಿ 6 ವರ್ಷದ ಬಾಲಕಿಯ ಮೇಲೆ 11 ವರ್ಷದ ಬಾಲಕ ಅತ್ಯಾಚಾರವೆಸಗಿರುವ ಘಟನೆ  ನಡೆದಿದೆ.

ಬಾಲಕಿಯ ತಂದೆಯ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಿ, 4ನೇ ತರಗತಿ ವಿದ್ಯಾರ್ಥಿಯಾಗಿರುವ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

ಏಪ್ರಿಲ್ 8 ರಂದು ರಾತ್ರಿ 7:30 ರ ಸುಮಾರಿಗೆ ಬಾಲಕಿ ಟ್ಯೂಷನ್​​ ಕ್ಲಾಸ್​​ ಮುಗಿಸಿ ಬರುವ ಹೊತ್ತಿಗೆ ಬಾಲಕಿಯನ್ನು ಬಾಲಕ ತನ್ನೊಂದೊಗೆ ನಿರ್ಜನ ಪ್ರದೇಶಕ್ಕೆ ಕರೆದೊಯ್ಯದು ಅತ್ಯಾಚಾರ ವೆಸಗಿರುವುದು ತನಿಖೆಯ ವೇಳೆ ತಿಳಿದು ಬಂದಿದೆ.

ಟ್ಯೂಷನ್​​ ಕ್ಲಾಸ್​ ಮುಗಿಸಿ ಮನೆ ಬಂದ ಬಾಲಕಿಯ ಬಟ್ಟೆಯಲ್ಲಿ ರಕ್ತಸ್ರಾವ ಕಂಡು ಪೋಷಕರಿಗೆ ಅನುಮಾನ ಹುಟ್ಟಿಕೊಂಡಿದ್ದು, ವಿಚಾರಿಸಿದ ವೇಳೆ ಏನಾಯ್ತು ಎಂಬುದನ್ನು ಆಕೆ ಪೋಷಕರಿಗೆ ಹೇಳಿದ್ದಾಳೆ. ಬಾಲಕ ಪರಿಚಯಸ್ಥನೇ ಎಂದು ಬಾಲಕಿ ಪೋಷಕರಿಗೆ ತಿಳಿಸಿದ್ದಾಳೆ.

ವೈದ್ಯಕೀಯ ಪರೀಕ್ಷೆಯ ವೇಳೆ ಅತ್ಯಾಚಾರ ದೃಢಪಟ್ಟಿದ್ದು, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಸೇರಿದಂತೆ ಕಾನೂನಿನ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಬಾಲಕನ ಮೇಲೆ ಕೇಸು ದಾಖಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು