News Karnataka Kannada
Friday, May 03 2024
ದೇಶ

ವಿಶ್ವದ 100 ಅತ್ಯುತ್ತಮ ಕಂಪನಿಗಳಲ್ಲಿ ಇನ್ಫೋಸಿಸ್ ಗೆ ಸ್ಥಾನ

Infosys ranked among world's 100 best companies
Photo Credit : Pixabay

ನವದೆಹಲಿ: ದೇಶದ ಹೆಮ್ಮೆಯ ಐಟಿ ಕಂಪನಿ ಇನ್ಫೋಸಿಸ್ ಗೆ ಮತ್ತೊಂದು ಸಾಧನೆಯ ಗರಿ ದೊರೆತಿದೆ. ಟೈಮ್ ನಿಯತಕಾಲಿಕ ಬಿಡುಗಡೆ ಮಾಡಿದ ವಿಶ್ವದ 100 ಅತ್ಯುತ್ತಮ ಕಂಪನಿಗಳು 2023ರ ಪಟ್ಟಿಯಲ್ಲಿ ಭಾರತದ ಏಕೈಕ ಕಂಪನಿ ಇನ್ಫೋಸಿಸ್ ಸ್ಥಾನ ಪಡೆದಿದೆ. ಬೆಂಗಳೂರು ಮೂಲದ ಐಟಿ ಸೇವಾ ಸಂಸ್ಥೆ ಇನ್ಫೋಸಿಸ್ 88.38 ಅಂಕಗಳೊಂದಿಗೆ ಪಟ್ಟಿಯಲ್ಲಿ 64ನೇ ಸ್ಥಾನದಲ್ಲಿದೆ.

“ಟೈಮ್ ವರ್ಲ್ಡ್ಸ್ ಬೆಸ್ಟ್ ಕಂಪನಿಗಳು 2023 ಪಟ್ಟಿಯಲ್ಲಿ ಇನ್ಫೋಸಿಸ್ ಸ್ಥಾನ ಪಡೆದಿದೆ. ನಾವು ಟಾಪ್ 100 ಜಾಗತಿಕ ವೃತ್ತಿಪರ ಸೇವಾ ಸಂಸ್ಥೆಗಳಲ್ಲಿ ಒಬ್ಬರಾಗಿದ್ದೇವೆ ಮತ್ತು ಟಾಪ್ 100 ವಿಶ್ವದ ಕಂಪನಿಗಳಲ್ಲಿ ಸ್ಥಾನ ಪಡೆದ ಭಾರತದ ಏಕೈಕ ಕಂಪನಿ ಆಗಿದ್ದೇವೆ ” ಎಂದು ಇನ್ಫೋಸಿಸ್ ಟ್ವೀಟ್ ಮಾಡಿದೆ.

ಮೈಕ್ರೋಸಾಫ್ಟ್ ಸಂಸ್ಥೆ 96.46 ಅಂಕಗಳೊಂದಿಗೆ ವಿಶ್ವದ ಅತ್ಯುತ್ತಮ ಸಂಸ್ಥೆ ಎಂದು ಪರಿಗಣಿತವಾಗಿದೆ. ಟೈಮ್ ಮ್ಯಾಗಜೀನ್ ಮತ್ತು ಸ್ಟಾಟಿಶಿಯಾ ಸಂಸ್ಥೆಗಳು ಸೇರಿ ವಿಶ್ವದ ಒಟ್ಟು 750 ಬೆಸ್ಟ್ ಕಂಪನಿಗಳ ಪಟ್ಟಿ ತಯಾರಿಸಿವೆ. ಇದರಲ್ಲಿ ಮೊದಲ ನಾಲ್ಕು ಕಂಪನಿಗಳು ಅಮೆರಿಕದ ಟೆಕ್ ದೈತ್ಯ ಸಂಸ್ಥೆಗಳೇ ಆಗಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು