News Karnataka Kannada
Monday, April 29 2024
ಜಮ್ಮು-ಕಾಶ್ಮೀರ

ನಾಲ್ಕನೇ ದಿನಕ್ಕೆ ಮುಂದುವರಿದ ಅನಂತನಾಗ್‌ ಎನ್‌ಕೌಂಟರ್‌: ಉಗ್ರರ ಪತ್ತೆಗೆ ಡ್ರೋನ್‌ ಬಳಕೆ

Anantnag encounter continues for fourth day, drones used to track down terrorists
Photo Credit : Pixabay

ಶ್ರೀನಗರ: ಜಮ್ಮು-ಕಾಶ್ಮೀರದ ಅನಂತನಾಗ್‌ ಜಿಲ್ಲೆಯಲ್ಲಿ ಭದ್ರತಾ ಪಡೆ ಮತ್ತು ಯೋಧರ ನಡುವೆ ನಡೆಯುತ್ತಿರುವ ಗುಂಡಿನ ಕಾಳಗ ನಾಲ್ಕನೇ ದಿನವೂ ಮುಂದುವರಿದಿದೆ. ಅವಿತಿರುವ ಉಗ್ರರನ್ನು ಪತ್ತೆಹಚ್ಚಲು ಭದ್ರತಾ ಪಡೆ ನಿರಂತರ ಶೋಧ ನಡೆಸುತ್ತಿದೆ. ಕಾರ್ಯಾಚರಣೆಗಾಗಿ ಡ್ರೋನ್‌ಗಳನ್ನು ಬಳಸಲಾಗಿದೆ.

ಕೊನೆಯ ಉಗ್ರನನ್ನು ಸದೆ ಬಡಿದು ನಿರ್ಗಮಿಸುತ್ತೇವೆ ಎಂದು ಸೇನೆಯ ಮುಖ್ಯಸ್ಥರು ಹೇಳಿದ್ದಾರೆ. ಉಗ್ರರ ಗುಂಡಿಗೆ ಮೂವರು ಸೇನಾ ಅಧಿಕಾರಿಗಳು ಮತ್ತು ಓರ್ವ ಪೊಲೀಸ್‌ ಅಧಿಕಾರಿ ಬಲಿಯಾಗಿದ್ದಾರೆ. ಉಗ್ರರ ಕಡೆಯಿಂದಲೂ ಹಲವರು ಸತ್ತಿದ್ದಾರೆ ಎನ್ನುವ ಅನುಮಾನವಿದೆ. ಆದರೆ ಭದ್ರತಾ ಪಡೆಗೆ ಶವಗಳು ಸಿಕ್ಕಿಲ್ಲ.

ಅನಂತನಾಗ್‌ನಲ್ಲಿ ಇನ್ನಷ್ಟು ಉಗ್ರರು ಇರುವ ಕುರಿತು ಖಚಿತ ಮಾಹಿತಿ ಸಿಕ್ಕಿ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಭದ್ರತಾ ಪಡೆ ಅಧಿಕಾರಿಗಳು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು