ದುಬೈ: ಯುನೈಟೆಡ್ ಅರಬ್ ಎಮಿರೇಟ್ಸ್ನ (ಯುಎಇ) ಪ್ರಮುಖ ಸಾಪ್ತಾಹಿಕ ಡ್ರಾ ಮಹ್ಜೂಜ್ನಲ್ಲಿ ದುಬೈ ಮೂಲದ ಭಾರತೀಯ ವ್ಯಕ್ತಿಯೊಬ್ಬರು AED20 ಮಿಲಿಯನ್ ಬಹುಮಾನವನ್ನು ಗೆದ್ದಿದ್ದಾರೆ.
ಮೂಲತಃ ಮುಂಬೈನವರಾದ 47 ವರ್ಷದ ಸಿಎಡಿ ತಂತ್ರಜ್ಞ ಸಚಿನ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, 25 ವರ್ಷಗಳಿಂದ ದುಬೈನಲ್ಲಿ ನೆಲೆಸಿದ್ದಾರೆ. ಜುಲೈ 29 ರಂದು ನಡೆದ 139 ನೇ ಡ್ರಾದಲ್ಲಿ ಅವರನ್ನು ವಿಜೇತ ಎಂದು ಘೋಷಿಸಲಾಗಿದೆ.
ಬಹುಮಾನವನ್ನು ಘೋಷಣೆಯಾದ ದಿನವೇ ಸಚಿನ್ ಮನೆಗೆ ಬೆಕ್ಕಿನ ಮರಿಯೊಂದನ್ನು ತಂದಿದ್ದು, ಈ ಬೆಕ್ಕಿನ ಮರಿಯೇ ಗೆಲುವಿಗೆ ಕಾರಣ ಎಂದು ಹಾಸ್ಯಮಯವಾಗಿ ಸಂತೋಷ ವ್ಯಕ್ತಪಡಿಸಿದ್ದಾರೆ. ಸಚಿನ್ ತನ್ನ ಹೆಂಡತಿ ಮತ್ತು ಮೂವರು ಮಕ್ಕಳೊಂದಿಗೆ ದುಬೈನಲ್ಲಿ ವಾಸಿಸುತ್ತಿದ್ದಾರೆ.
ಈ ಬಗ್ಗೆ ಖುಷಿ ಹಂಚಿಕೊಂಡಿರುವ ಸಚಿನ್ ನಾನು ಪ್ರತಿ ವಾರ ಮಹ್ಝೂಜ್ನಲ್ಲಿ ಭಾಗವಹಿಸುತ್ತಿದ್ದೆ. ಅಲ್ಲದೆ ಒಂದು ದೊಡ್ಡ ಗೆಲುವಿನ ನಿರೀಕ್ಷೆಯಲ್ಲಿದೆ. ಬಹುಮಾನ ದೊರೆತಿದ್ದು, ಅದೃಷ್ಟ ಬದಲಾಗಿದೆ ಎಂದು ಹೇಳಿದ್ದಾರೆ. ಡ್ರಾ ಕುರಿತು ಮಾತನಾಡಿರುವ ಡ್ರಾ ಕಂಪನಿಯಾದ ಇವಿಂಗ್ಸ್ನ ಕಮ್ಯುನಿಕೇಷನ್ಸ್ ಮತ್ತು ಸಿಎಸ್ಆರ್ ಮುಖ್ಯಸ್ಥೆ, ಮಹ್ಝೂಜ್, ಭಾರತೀಯ ಸಮುದಾಯ ಸದಸ್ಯರು ವಿಜೇತರಾಗಿರುವುದು ಸಂತೋಷದ ವಿಚಾರ. ಭಾರತೀಯ ಸಮುದಾಯವು ಮಹಜೂಜ್ನಲ್ಲಿ ಬಹುಸಂಖ್ಯೆಯಲ್ಲಿ ಈ ಮೊದಲಿನಿಂದಲೂ ಭಾಗಿಯಾಗುತ್ತಿದ್ದಾರೆ ಎಂದಿದ್ದಾರೆ.