News Karnataka Kannada
Friday, May 10 2024
ದೇಶ

ಅಮೆರಿಕ ಸೈನಿಕರಿಗೆ ‘ಜೈ ಶ್ರೀರಾಮ್‌’ ಘೋಷಣೆ ಹೇಳಿಕೊಟ್ಟ ಭಾರತದ ಸೈನಿಕರು

ಸಾಂಸ್ಕೃತಿಕ ಏಕತೆ ಹಾಗೂ ಮಿಲಿಟರಿ ಸೌಹಾರ್ದತೆಯ ವಿಚಾರ ಬಂದಾಗ ವಿಶ್ವದ ಎಲ್ಲಾ ದೇಶಗಳು ಭಾರತೀಯ ಸೇನೆಯತ್ತ ನೋಡುತ್ತಾರೆ. ಅಂಥದ್ದೊಂದು ಆತ್ಮೀಯ ಸಾಮರಸ್ಯ ಭಾರತದ ಸೇನೆಯಲ್ಲಿದೆ. ಭಾರತೀಯ ಸೇನೆಯ ಹೆಮ್ಮೆಯ ಸೈನಿಕರು ಅಮೆರಿಕದ ಸೈನಿಕರಿಗೆ 'ಜೈ ಶ್ರೀ ರಾಮ್' ಮತ್ತು 'ಛತ್ರಪತಿ ಶಿವಾಜಿ ಮಹಾರಾಜ್ ಕೀ ಜೈ' ಘೋಷಣೆಯನ್ನು ಹೇಳುವುದು ಹೇಗೆ ಎಂದು ತಿಳಿಸಿರುವ ವಿಡಿಯೋ ಭಾರೀ ವೈರಲ್‌ ಆಗಿದೆ.
Photo Credit : News Kannada

ದೆಹಲಿ: ಸಾಂಸ್ಕೃತಿಕ ಏಕತೆ ಹಾಗೂ ಮಿಲಿಟರಿ ಸೌಹಾರ್ದತೆಯ ವಿಚಾರ ಬಂದಾಗ ವಿಶ್ವದ ಎಲ್ಲಾ ದೇಶಗಳು ಭಾರತೀಯ ಸೇನೆಯತ್ತ ನೋಡುತ್ತಾರೆ. ಅಂಥದ್ದೊಂದು ಆತ್ಮೀಯ ಸಾಮರಸ್ಯ ಭಾರತದ ಸೇನೆಯಲ್ಲಿದೆ. ಭಾರತೀಯ ಸೇನೆಯ ಹೆಮ್ಮೆಯ ಸೈನಿಕರು ಅಮೆರಿಕದ ಸೈನಿಕರಿಗೆ ‘ಜೈ ಶ್ರೀ ರಾಮ್’ ಮತ್ತು ‘ಛತ್ರಪತಿ ಶಿವಾಜಿ ಮಹಾರಾಜ್ ಕೀ ಜೈ’ ಘೋಷಣೆಯನ್ನು ಹೇಳುವುದು ಹೇಗೆ ಎಂದು ತಿಳಿಸಿರುವ ವಿಡಿಯೋ ಭಾರೀ ವೈರಲ್‌ ಆಗಿದೆ.

ಇದು ಎರಡೂ ದೇಶದ ಸೈನಿಕರ ಗಮನಸೆಳೆದಿದೆ. ಭಾರತೀಯ ಸೇನೆಯ ಮದ್ರಾಸ್‌ ಲೈಟ್‌ ಇನ್‌ಫ್ಯಾಂಟ್ರಿ ಪಡೆಯ ಯೋಧರು ಅಮೆರಿಕದ ಸೈನಿಕರಿಗೆ ತಮ್ಮ ವಿಜಯಘೋಷವನ್ನು ತಿಳಿಸಿಕೊಟ್ಟಿದ್ದಾರೆ. ಇದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಭಾರತೀಯ ಸೈನಿಕರು ತಮ್ಮ ಸ್ನೇಹಪರ ಅಮೆರಿಕದ ಸೈನಿಕರಿಗೆ ತಮ್ಮ ವಿಜಯಘೋಷವನ್ನು ಹೇಗೆ ಉಚ್ಚರಿಸಬೇಕು ಎನ್ನುವುದನ್ನು ಹೇಳಿದ್ದಾರೆ. ಅಮೇರಿಕನ್ ಸೈನಿಕರು ಸಹ ಪೂರ್ಣ ಉತ್ಸಾಹದಿಂದ ‘ಜೈ ಶ್ರೀ ರಾಮ್’ ಹಾಗು ‘ಛತ್ರಪತಿ ಶಿವಾಜಿ ಮಹಾರಾಜ್ ಕೀ ಜೈ’ ಘೋಷಣೆ ಇದನ್ನು ಅಚ್ಚುಕಟ್ಟಾಗಿ ಹೇಳಲು ಪ್ರಯತ್ನಿಸಿದ್ದಾರೆ. ಬಳಿಕ ಹರ್ಷ ವ್ಯಕ್ತಪಡಿಸಿದ್ದಾರೆ

ಇದು ಭಾರತೀಯ ಸೈನಿಕರ ಉದಾರತೆ ಮತ್ತು ಅಮೆರಿಕದ ಸೈನಿಕರ ಕಲಿಕೆ, ಸದ್ಭಾವನೆ ಮತ್ತು ಸ್ನೇಹದ ಮನೋಭಾವವನ್ನು ಸಂಕೇತಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಜನರು ಭಾರತೀಯ ಯೋಧರನ್ನು ಕೊಂಡಾಡುತ್ತಿದ್ದಾರೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು