ಶಿಮ್ಲಾ: ಹಿಮಾಚಲ ಪ್ರದೇಶದ ಸೋಲನ್ ಜಿಲ್ಲೆಯಲ್ಲಿ 602 ವರ್ಷಗಳಷ್ಟು ಹಳೆಯದಾದ ನಲಗಢ ಕೋಟೆಯ ಒಂದು ಭಾಗವು ಭಾರೀ ಮಳೆಯಿಂದ ಶನಿವಾರ ಕುಸಿದಿದೆ. ದೆಹಲಿಯಿಂದ ಸುಮಾರು 300 ಕಿಮೀ ಮತ್ತು ಚಂಡೀಗಢದಿಂದ 60 ಕಿಮೀ ದೂರದಲ್ಲಿರುವ ಈ ಕೋಟೆಯನ್ನು 1421 ರಲ್ಲಿ ನಿರ್ಮಿಸಲಾಗಿತ್ತು. ಕೋಟೆಯ ನಾಲ್ಕು ಕೊಠಡಿಗಳು ಕುಸಿದಿವೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಇದೀಗ ಕೋಟೆಯ ಒಂದು ಭಾಗವನ್ನು ರೆಸಾರ್ಟ್ ಆಗಿ ಮಾರ್ಪಾಡು ಮಾಡಲಾಗಿದ್ದು, ಹಿಮಾಚಲ ಪ್ರದೇಶದ ಮಾಜಿ ಆರೋಗ್ಯ ಸಚಿವ ವಿಜೇಂದರ್ ಸಿಂಗ್ ಅವರು ರೆಸಾರ್ಟ್ ಆಗಿ ಪರಿವರ್ತನೆಗೊಂಡ ಕೋಟೆಯ ಮಾಲೀಕರಾಗಿದ್ದಾರೆ. ದುರಂತ ಸಂಭವಿಸಿದಾಗ ಅವರ ಮಗ ಜಿತೇಂದ್ರ ಸಿಂಗ್ ರೆಸಾರ್ಟ್ನಲ್ಲಿದ್ದರು. ಫೋರ್ಟ್ ಅನ್ನು ಮೊಘಲ್ ವಾಸ್ತುಶಿಲ್ಪ ಅನುಸಾರ ನಿರ್ಮಿಸಲಾಗಿದೆ.