ಪ್ಯಾರಿಸ್: ವಿಶ್ವಪ್ರಸಿದ್ಧ ಐಫೆಲ್ ಟವರ್ ಗೆ ಬಾಂಬ್ ಹಾಕುವುದಾಗಿ ಬೆದರಿಕೆ ಒಡ್ಡಲಾಗಿದ್ದು, ಭದ್ರತಾ ದೃಷ್ಟಿಯಿಂದ ಪ್ರವಾಸಿಗರನ್ನು ಸ್ಥಳಾಂತರ ಮಾಡಲಾಯಿತು. ಶನಿವಾರ ಬಾಂಬ್ ಬೆದರಿಕೆ ಬಂದಾಕ್ಷಣ ಐಫೆಲ್ ಟವರ್ ಗೆ ಪ್ರವಾಸಿಗರ ಪ್ರವೇಶ ನಿರಾಕರಿಸಲಾಯಿತು.
ಇದೇ ವೇಳೆ ಒಳಗಡೆ ಸಿಲುಕಿದ್ದವರನ್ನು ಬೇರೆಡೆಗೆ ಸ್ಥಳಾಂತರಿಸಲಾಯಿತು. ಪೊಲೀಸರು, ಬಾಂಬ್ ನಿಷ್ಕ್ರಿಯ ತಜ್ಞರು ಪ್ರದೇಶವನ್ನು ಶೋಧಿಸುತ್ತಿದ್ದಾರೆ. ಐಫೆಲ್ ಟವರ್ ಪ್ಯಾರಿಸ್ ನ ಹೆಗ್ಗುರುತಾಗಿದ್ದು, ವಿಶ್ವದ ಅತಿ ಹೆಚ್ಚು ಭೇಟಿ ನೀಡುವ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಐಫೆಲ್ ಗೋಪುರದ ನಿರ್ಮಾಣ ಕಾರ್ಯವು ಜನವರಿ 1887 ರಲ್ಲಿ ಪ್ರಾರಂಭವಾಗಿ, 1889 ಮಾರ್ಚ್ 31ರಂದು ಪೂರ್ಣಗೊಂಡಿತು.