News Karnataka Kannada
Thursday, May 02 2024
ಪಂಜಾಬ್

ವಿಶ್ವದ ಅತಿ ಎತ್ತರದ ಎಲ್ಬ್ರಸ್ ಪರ್ವತದಲ್ಲಿ ತ್ರಿವರ್ಣಧ್ವಜ ಹಾರಿಸಿದ ಭಾರತದ ಸಾಹಸಿ

Indian adventurer hoists tricolour at world's highest mountain Mount Elbrus
Photo Credit : IANS

ಚಂಡೀಗಢ: ಸ್ವಾತಂತ್ರ್ಯದ 76 ವರ್ಷಗಳ ಸ್ಮರಣಾರ್ಥ ಪಂಜಾಬ್‌ನ ಹಿರಿಯ ಪೊಲೀಸ್ ಅಧಿಕಾರಿ ಗುರ್ಜೋತ್ ಸಿಂಗ್ ಕಾಲರ್ ಅವರು ರಷ್ಯಾ ಮತ್ತು ಯುರೋಪ್‌ನ ಅತಿ ಎತ್ತರದ ಶಿಖರವಾದ ಎಲ್ಬ್ರಸ್ ಪರ್ವತದ ಮೇಲೆ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿ ದೇಶಪ್ರೇಮ ಮೆರೆದಿದ್ದಾರೆ.

ಉತ್ತರಾಖಂಡದ ನೆಹರು ಇನ್‌ಸ್ಟಿಟ್ಯೂಟ್ ಆಫ್ ಮೌಂಟೇನಿಯರಿಂಗ್ (ಎನ್‌ಐಎಂ) ನಲ್ಲಿ ವೃತ್ತಿಪರ ತರಬೇತಿ ಪಡೆದಿರುವ ಪೊಲೀಸ್ ಅಧಿಕಾರಿ ಗುರ್ಜೋತ್ ಸಿಂಗ್ ಕಾಲರ್ ಈ ಸಾಹಸ ಮಾಡಿದವರು. ಕಾಕಸಸ್‌ನ ಅತಿ ಎತ್ತರದ ಪರ್ವತವಾದ ಮೌಂಟ್ ಎಲ್ಬ್ರಸ್ ಸಮುದ್ರ ಮಟ್ಟದಿಂದ 5,642 ಮೀಟರ್ (18,510 ಅಡಿ) ಎತ್ತರದಲ್ಲಿದೆ. ಕಾಲರ್‌ ಈ ಪರ್ವತವನ್ನು ಏರಿ ಅಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿದ್ದಾರೆ. ಭಾರೀ ಹಿಮಬಿರುಗಾಳಿ, ಗುಡುಗು, ಮಿಂಚಿನ ವಾತಾವರಣದ ನಡುವೆ ಆಗಸ್ಟ್ 11 ರಂದು ಬೆಳಿಗ್ಗೆ 7 ಗಂಟೆಗೆ ಮೌಂಟ್ ಎಲ್ಬ್ರಸ್ ತುದಿಯನ್ನು ತಲುಪಿದ್ದಾರೆ.

ಇವರೊಂದಿಗೆ ನಾಲ್ವರು ಜೊತೆಯಾಗಿ ಸಾಹಸಕ್ಕೆ ಸಾಥ್‌ ನೀಡಿದ್ದರು. ಎಲ್ಬ್ರಸ್ ಪರ್ವತವು ಸುತ್ತಲೂ ಹಿಮದಿಂದ ಆವೃತವಾಗಿದ್ದು, 22 ಹಿಮನದಿಗಳಿಗೆ ನೆಲೆಯಾಗಿದೆ. ಬಕ್ಸನ್, ಮಲ್ಕಾ ಮತ್ತು ಕುಬನ್ ನಂತಹ ನದಿಗಳಿಗೆ ಮೂಲವಾಗಿದೆ. ಪರ್ವತವು ರಷ್ಯಾದ ದಕ್ಷಿಣದಲ್ಲಿರುವ ಜಾರ್ಜಿಯನ್ ಗಡಿಯ ಸಮೀಪದಲ್ಲಿದೆ. ಕಾಕಸಸ್ ತಾಂತ್ರಿಕವಾಗಿ ಏಷ್ಯಾ ಮತ್ತು ಯುರೋಪ್ ನಲ್ಲಿದೆ. ಅಂದರೆ ಇದು ಎರಡು ಖಂಡಗಳನ್ನು ವ್ಯಾಪಿಸಿರುವ ಪರ್ವತ ಶ್ರೇಣಿಯಾಗಿದೆ.

ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನ ಏರಿಕೆಯ ವಿರುದ್ಧ ಹೋರಾಡುವ ಉದ್ದೇಶದಿಂದ ನಾನು ಪರ್ವತ ಏರುವ ಸಾಹಸಕ್ಕೆ ಮುಂದಾದೆ ಎಂದು ಕಾಲರ್‌ ತಿಳಿಸಿದ್ದು, ಕ್ಷೀಣಿಸುತ್ತಿರುವ ಅರಣ್ಯ, ಹಿಮನದಿಗಳ ಕರಗುವಿಕೆ ಬಗ್ಗೆ ಜಾಗೃತಿ ಮೂಡಿಸುವುದು ನನ್ನ ಉದ್ದೇಶ ಎಂದು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು