News Karnataka Kannada
Tuesday, May 07 2024
ಗುಜರಾತ್

ಪ್ರಧಾನಿಯಾದರೂ ತಮ್ಮ ಹೆಸರಿನಲ್ಲಿ ಸ್ವಂತ ಮನೆಯೇ ಇಲ್ಲ ಎಂದ ಮೋದಿ

Pm Modi says he doesn't have a house of his own in his name
Photo Credit : Twitter

ಅಹಮದಾಬಾದ್: ತಮ್ಮ ಹೆಸರಿನಲ್ಲಿ ಸ್ವಂತ ಮನೆ ಇಲ್ಲ. ಆದರೂ ಕೇಂದ್ರ ಸರ್ಕಾರ ದೇಶದ ಲಕ್ಷಾಂತರ ಹೆಣ್ಣು ಮಕ್ಕಳ ಹೆಸರಲ್ಲಿ ಮನೆ ನಿರ್ಮಿಸಿಕೊಟ್ಟಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಎರಡು ದಿನಗಳ ಭೇಟಿಗಾಗಿ ಗುಜರಾತ್‌ಗೆ ಆಗಮಿಸಿರುವ ಅವರು, ಛೋಟೌಡೇಪುರ್‌ ಜಿಲ್ಲೆಯ ಬೊಡೇಲಿ ಪಟ್ಟಣದಲ್ಲಿ 5,000 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದರು.

ನನ್ನ ಹೆಸರಿನಲ್ಲಿ ಸ್ವಂತ ಮನೆ ಇಲ್ಲ. ಆದರೆ ದೇಶದ ಲಕ್ಷಾಂತರ ಹೆಣ್ಣುಮಕ್ಕಳು ಈಗ ಮನೆಗಳ ಮಾಲೀಕರು ಆಗಿದ್ದಾರೆ. ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿ ಸ್ವಂತ ಮನೆಗಳನ್ನು ಹೊಂದಿ, ಬುಡಕಟ್ಟು, ದಲಿತ ಮತ್ತು ಹಿಂದುಳಿದ ವರ್ಗಗಳಿಗೆ ಸೇರಿದ ಕೋಟ್ಯಂತರ ಮಹಿಳೆಯರು ಈಗ ಲಕ್ಷಾಧೀಶ್ವರರಾಗಿದ್ದಾರೆ.

ಸಂಸತ್‌ನಲ್ಲಿ ಮಹಿಳಾ ವಿಧೇಯಕ ಅಂಗೀಕಾರ ಆಗದಂತೆ ಇಷ್ಟು ವರ್ಷಗಳು ಪ್ರತಿಪಕ್ಷ ನಾಯಕರು ಮ್ಯಾಚ್‌ ಫಿಕ್ಸಿಂಗ್‌ ನಲ್ಲಿ ತೊಡಗಿದ್ದರು. ಲೋಕಸಭೆಯಲ್ಲಿ ಅಂಗೀಕಾರದರೆ, ಅದನ್ನು ರಾಜ್ಯಸಭೆಯಲ್ಲಿ ಅಂಗೀಕಾರ ಆಗದಂತೆ ತಡೆಯುತ್ತಿದ್ದರು. ಇವರ ಬಗ್ಗೆ ಮಹಿಳೆಯರು ಜಾಗ್ರತೆ ವಹಿಸಬೇಕಿದೆ. ಬಿಜೆಪಿ ಸರ್ಕಾರ ಯಶಸ್ವಿಯಾಗಿ ಎರಡೂ ಕಡೆಗಳಲ್ಲಿ ವಿಧೇಯಕಕ್ಕೆ ಅಂಗೀಕಾರ ಪಡೆದಿದೆ ಎಂದಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು