ಪಣಜಿ: ಉತ್ತರ ಗೋವಾದ ಬಿಚೋಲಿಮ್ನಲ್ಲಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಓದುತ್ತಿದ್ದ 11 ಬಾಲಕಿಯರ ಮೇಲೆ ಇಬ್ಬರು ಸಹಪಾಠಿ ಬಾಲಕರು ಪೆಪ್ಪರ್ ಸ್ಪ್ರೇ ಸಿಂಪಡಿಸಿದ್ದು, ಎಲ್ಲ 11 ಬಾಲಕಿಯರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮೋಜಿಗಾಗಿ ನಾವು ಈ ಕೃತ್ಯ ನಡೆಸಿದ್ದೇವೆ ಎಂದು ಹುಡುಗರು ಹೇಳಿದ್ದಾರೆ. ಘಟನೆ ವಿವರ ಪಡೆಯಲು ಶಾಲಾ ಸಿಸಿಟಿವಿ ದೃಶ್ಯಾವಳಿ ವಿವರ ಸಲ್ಲಿಸುವಂತೆ ಪೊಲೀಸರು ಸೂಚಿಸಿದ್ದು, ಸ್ಪ್ರೇ ಸಿಂಪಡಿಸಿದ ಬಾಲಕರು ಅಪ್ರಾಪ್ತರಾಗಿದ್ದು, ಪೆಪ್ಪರ್ ಸ್ಪ್ರೇ ಅನ್ನು ಆನ್ಲೈನ್ ನಿಂದ ಖರೀದಿಸಿದ್ದರು ಎಂದು ತಿಳಿದು ಬಂದಿದೆ.
ಪೆಪ್ಪರ್ ಸ್ಪ್ರೇ ಸಿಂಪಡಣೆ ನಂತರ 11 ವಿದ್ಯಾರ್ಥಿನಿಯರು ತೀವ್ರ ಉರಿ ಮತ್ತು ಅಸ್ವಸ್ಥತೆ ಅನುಭವಿಸಿದ್ದು, ವಿದ್ಯಾರ್ಥಿನಿಯರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಹಿಂದೆಯೂ ಇದೇ ಶಾಲೆಯಲ್ಲಿ ಇದೇ ರೀತಿಯ ಘಟನೆ ನಡೆದಿದ್ದು, ಇಬ್ಬರು ಬಾಲಕರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.