ಪಣಜಿ: ಕರಾವಳಿಯ ಪ್ರತಿಭಾವಂತ ನಟ ರಿಷಬ್ ಶೆಟ್ಟಿ ಅವರ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ ಸೇರಿದೆ. ಗೋವಾದಲ್ಲಿ ನಡೆಯುತ್ತಿರುವ 54 ನೇಯ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕಾಂತಾರ ಕನ್ನಡ ಚಲನಚಿತ್ರಕ್ಕಾಗಿ ನಟ ರಿಷಬ್ ಶೆಟ್ಟಿ ಅವರಿಗೆ ಸ್ಪೆಶಲ್ ಜ್ಯೂರಿ ಅವಾರ್ಡ್ ನೀಡಿ ಗೌರವಿಸಲಾಗಿದೆ.
ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ಟರ್ಕಿಶ್ ನಿರ್ದೇಶಕ ರೆಗರ್ ಆಜಾದ್ ಕಾಯಾ ಅವರ “ವೆನ್ ದಿ ಸೀಡ್ಲಿಂಗ್ಸ್ ಗ್ರೋ” ಚಿತ್ರ ಪಡೆದುಕೊಂಡಿದೆ. ‘ಪಂಚಾಯತ್ ಸೀಸನ್ 2’ ಇಫಿನಲ್ಲಿ ಅತ್ಯುತ್ತಮ ಒಟಿಟಿ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಡ್ರಿಫ್ಟ ಚಲನಚಿತ್ರಕ್ಕೆ ಐಸಿಎಫ್ಟಿ ಗಾಂದಿ ಯುನೆಸ್ಕೊ ಅವಾರ್ಡ, ಎಂಡ್ಲೆಸ್ ಬಾರ್ಡರ್ಸ ಚಲನಚಿತ್ರಕ್ಕೆ ಗೋಲ್ಡನ್ ಪಾಕಾಕ್ ಪ್ರಶಸ್ತಿ, ಅತ್ಯುತ್ತಮ ನಟಿ ಪ್ರಶಸ್ತಿ ಮೆಲಾನಿ ಥಿಯೆರ್ರಿ ಗೆ ಲಭಿಸಿದೆ.
ಹಾಲಿವುಡ್ ನಟ ಮೈಕೆಲ್ ಡಗ್ಲಾಸ್ ಅವರಿಗೆ ಸತ್ಯಜಿತ್ ರೇ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಲಾಗಿದೆ. ಬ್ಲಾಗಾಸ್ ಲೆಸನ್ಸ ಚಿತ್ರಕ್ಕಾಗಿ ಉತ್ತಮ ನಟ ಪ್ರಶಸ್ತಿಯನ್ನು ಪೌರಿಯಾ ರಹಿಮಿ ಸ್ಯಾಮ್ ರವರಿಗೆ ನೀಡಿ ಗೌರವಿಸಲಾಗಿದೆ. ಉತ್ತಮ ನಿರ್ದೇಶಕ ಪ್ರಶಸ್ತಿಯನ್ನು ಸ್ಟೀಫನ್ ಕೊಮಾಂಡರ್ಗೆ ನೀಡಿ ಗೌರವಿಸಲಾಗಿದೆ.
Thank you #IFFI54 for bestowing the ‘Special Jury Award’ to Kantara.
ಎಲ್ಲರಿಗೂ ಧನ್ಯವಾದಗಳು.#Kantara #Kantarachapter1@hombalefilms pic.twitter.com/APFy4mfYWc— Rishab Shetty (@shetty_rishab) November 28, 2023