ಪುಣೆ: ಇಂಡಿಗೋ ಏರ್ಲೈನ್ ಇತ್ತೀಚೆಗೆ ‘ಪರಮ ವೀರ ಚಕ್ರ’ ಪ್ರಶಸ್ತಿ ಪುರಸ್ಕೃತ ಸುಬೇದಾರ್ ಮೇಜರ್ ಸಂಜಯ್ ಕುಮಾರ್ ಅವರಿಗೆ ಭಾನುವಾರ ತನ್ನ ವಿಮಾನದಲ್ಲಿ ಆತಿಥ್ಯ ನೀಡಿತು. ಸುಬೇದಾರ್ ಮೇಜರ್ ಸಂಜಯ್ ಕುಮಾರ್ ಪುಣೆಗೆ ಹೋಗುವ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಈ ಸಂದರ್ಭದಲ್ಲಿ ವಿಮಾನ ಟೇಕ್ ಆಫ್ ಆಗುವ ಮೊದಲು ವಿಮಾನ ಸಿಬ್ಬಂದಿ ಅವರನ್ನು ಗೌರವಿಸಿದರು.
ಇಂಡಿಗೋ ತನ್ನ ಟ್ವಿಟ್ಟರ್ ಹ್ಯಾಂಡಲ್ನಲ್ಲಿ ಅದರ ವೀಡಿಯೊವನ್ನು ಹಂಚಿಕೊಂಡಿದೆ. ವೀಡಿಯೊದಲ್ಲಿ, ಕ್ಯಾಪ್ಟನ್ ಎಡ್ಸೆಲ್ ವಿಮಾನದ ವಿವರಗಳನ್ನು ನೀಡುವುದನ್ನು ಕಾಣಬಹುದು ಮತ್ತು ನಂತರ ಸಂಜಯ್ ಕುಮಾರ್ ಅವರನ್ನು ವಿಮಾನದಲ್ಲಿ ಸ್ವಾಗತಿಸಿದರು. ‘ಇಂದು, ನಮ್ಮೊಂದಿಗೆ ಬಹಳ ವಿಶೇಷ ವ್ಯಕ್ತಿ ಇದ್ದಾರೆ … ನಮ್ಮ ಜೊತೆ ಪರಮವೀರ ಚಕ್ರ ಪುರಸ್ಕೃತ ಸುಬೇದಾರ್ ಮೇಜರ್ ಸಂಜಯ್ ಕುಮಾರ್ ಜಿ ಪ್ರಯಾಣಿಸುತ್ತಿದ್ದಾರೆ ಎನ್ನುತ ಅವರು ಗಡಿಯಲ್ಲಿ ಹೇಗೆ ಹೋರಾಡಿದರು ಎಂಬುದನ್ನು ಹಂಚಿಕೊಂಡರು.
Flying with a hero: Subedar Major Sanjay Kumar ji, a Living Param Veer Chakra awardee! #goIndiGo #IndiaByIndiGo pic.twitter.com/CZsqlHxRj6
— IndiGo (@IndiGo6E) July 23, 2023
ಈ ವಿಡಿಯೋವನ್ನು ಟ್ವಿಟರ್ನಲ್ಲಿ 6 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ನೆಟ್ಟಿಗರು, ಇಂಡಿಗೋ ಕಾರ್ಯಕ್ಕೆ ಪ್ರಶಂಸಿಸಿದ್ದಾರೆ. ಯೋಧರ ಪರಾಕ್ರಮ ಫಲವಾಗಿಯೇ ನಾವೆಲ್ಲ ಇಂದು ನೆಮ್ಮದಿಯಾಗಿದ್ದೇವೆ ಎಂದಿದ್ದಾರೆ ಕೆಲವರು. ಇಂಥ ಹೆಮ್ಮೆಯ ಕ್ಷಣಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕೆ ಬಹಳ ಖುಷಿ ಎಂದು ಇನ್ನೂ ಕೆಲವರು ಇಂಡಿಗೋಗೆ ಧನ್ಯವಾದ ಅರ್ಪಿಸಿದ್ಧಾರೆ.