News Karnataka Kannada
Saturday, May 04 2024
ಮೈಸೂರು

ಮೈಸೂರಿನಲ್ಲಿ ಅಂತರಾಷ್ಟ್ರೀಯ ಕಿರುಚಿತ್ರ, ಸಾಕ್ಷ್ಯಚಿತ್ರೋತ್ಸವ

International Short Film and Documentary Festival in Mysore
Photo Credit : By Author

ಮೈಸೂರು: ‘ಭಾರತೀಯ ಚಿತ್ರ ಸಾಧನ‘ ಮತ್ತು ‘ಮೈಸೂರು ಸಿನಿಮಾ ಸೊಸೈಟಿ’ಗಳ ಸಹಯೋಗದೊಂದಿಗ ನಗರದಲ್ಲಿ 2024ರ ಫೆಬ್ರವರಿ 3 ಮತ್ತು 4 ರಂದು “ಪರಿದೃಶ್ಯ “ ಅಂತರಾಷ್ಟ್ರೀಯ ಕಿರುಚಿತ್ರ ಮತ್ತು ಸಾಕ್ಷ್ಯಚಿತ್ರೋತ್ಸವವನ್ನು ಆಯೋಜಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಮೈಸೂರು ಸಿನಿಮಾ ಸೊಸೈಟಿ ಡಾ. ಚಂದ್ರಶೇಖರ್ ಜಿಆರ್, ಸಂಯೋಜಕ ಹರೀಶ್, ಸಹ ಸಂಯೋಜಕಿ ಪದ್ಮಾವತಿ ಭಟ್, ಕಾರ್ಯಕ್ರಮ ಸಂಯೋಜಕ ಚೇತನ್, ವಿದ್ಯಾರ್ಥಿ ಮತ್ತು ವೃತ್ತಿಪರ ವಿಭಾಗಗಳೆರಡರಲ್ಲೂ ಈ ಅಂತರಾಷ್ಟ್ರೀಯ ಕಿರುಚಿತ್ರ ಮತ್ತು ಸಾಕ್ಷ್ಯಚಿತ್ರೋತ್ಸವ ನಡೆಯಲಿದೆ ಎಂದು ತಿಳಿಸಿದರು.

2022ರ ನಂತರ ಚಿತ್ರೀಕರಣಗೊಂಡ ಕಿರುಚಿತ್ರಗಳು ಮತ್ತು ಸಾಕ್ಷ್ಯಚಿತ್ರಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಈ ಸ್ಪರ್ಧೆಯಲ್ಲಿ ಅತ್ಯುತ್ತಮ ಕಿರುಚಿತ್ರ ,ಅತ್ಯುತ್ತಮ ನಿರ್ದೇಶಕ ,ಅತ್ಯುತ್ತಮ ನಟ, ಅತ್ಯುತ್ತಮ ನಟಿ , ಅತ್ಯುತ್ತಮ ಛಾಯಾಚಿತ್ರ, ಅತ್ಯುತ್ತಮ ಚಿತ್ರಕಥೆ , ಅತ್ಯುತ್ತಮ ಕಥೆ , ಅತ್ಯುತ್ತಮ ಧ್ವನಿ ಸಂಯೋಜನೆ ಹಾಗೂ ಇನ್ನಿತರ ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗುವುದು.

ಚಿತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ್ 15, 2023. ಚಿತ್ರಗಳನ್ನು https://filmfreeway.com/paridrishya ಈ ವಿಳಾಸಕ್ಕೆ ಅಪ್ಲೋಡ್ ಮಾಡಬಹುದು. ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ : https://paridrishyafilimfest.com ದೂರವಾಣಿ ಸಂಖ್ಯೆ :9980596824

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು