News Karnataka Kannada
Sunday, May 12 2024
ದೇಶ

2011ರಿಂದ ಪೌರತ್ವ ತೊರೆದ 17.5 ಲಕ್ಷ ಮಂದಿ ಭಾರತೀಯರು: ಡಾ.ಎಸ್ ಜೈಶಂಕರ್

passport
Photo Credit : News Kannada

ನವದೆಹಲಿ: ಈ ವರ್ಷದ ಜೂನ್‌ವರೆಗೆ 87,026 ಭಾರತೀಯರು ತಮ್ಮ ಪೌರತ್ವವನ್ನು ತ್ಯಜಿಸಿದ್ದಾರೆ ಎಂಬ ಅಂಶವನ್ನು ವಿದೇಶಾಂಗ ಸಚಿವ ಡಾ.ಎಸ್ ಜೈಶಂಕರ್ ಇತ್ತೀಚೆಗೆ ಲೋಕಸಭೆಯಲ್ಲಿ ಬಹಿರಂಗಪಡಿಸಿದ್ದಾರೆ.

2011ರಿಂದ 17.50 ಲಕ್ಷಕ್ಕೂ ಹೆಚ್ಚು ಭಾರತೀಯರು ತಮ್ಮ ಪೌರತ್ವವನ್ನು ತ್ಯಜಿಸಿದ್ದಾರೆ ಎಂದು ಡಾ. ಜೈಶಂಕರ್ ತಮ್ಮ ಲಿಖಿತ ಉತ್ತರದಲ್ಲಿ ಸೇರಿಸಿದ್ದಾರೆ. 2022ರಲ್ಲಿ 2,25,620, 2021ರಲ್ಲಿ 1,63,370 ಮತ್ತು 2020ರಲ್ಲಿ 85,256 ಭಾರತೀಯರು ತಮ್ಮ ಪೌರತ್ವವನ್ನು ತ್ಯಜಿಸಿದ್ದಾರೆ ಎಂದು ಅವರು ಹೇಳಿದರು.

ಈ ಬದಲಾಗುತ್ತಿರುವ ಪ್ರವೃತ್ತಿಗೆ ಕಾರಣಗಳನ್ನು ವಿದೇಶಾಂಗ ಸಚಿವರು ವಿವರಿಸಿದ್ದು ಕಳೆದ ಎರಡು ದಶಕಗಳಲ್ಲಿ ಜಾಗತಿಕ ಕೆಲಸದ ಸ್ಥಳವನ್ನು ಹುಡುಕುತ್ತಿರುವ ಭಾರತೀಯ ಪ್ರಜೆಗಳ ಸಂಖ್ಯೆಯು ಗಮನಾರ್ಹವಾಗಿದೆ. ಅವರಲ್ಲಿ ಹಲವರು ವೈಯಕ್ತಿಕ ಅನುಕೂಲಕ್ಕಾಗಿ ವಿದೇಶಿ ಪೌರತ್ವವನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು