News Karnataka Kannada
Monday, May 06 2024
ದೇಶ

ಹಾವು-ಮುಂಗುಸಿ ನಡುವೆ ರೋಚಕ ಕಾದಾಟದ ವಿಡಿಯೋ ವೈರಲ್: ಈ ದ್ವೇಷಕ್ಕೆ ಕಾರಣವೇನು ?

Fight
Photo Credit :

ವೈರಲ್: ಹಾವು ಹಾಗೂ ಮುಂಗುಸಿ ಪರಸ್ಪರ ಕಾದಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಎಕ್ಸ್ನಲ್ಲಿ ಟ್ರೆಂಡಿಂಗ್ ನಲ್ಲಿದ್ದು ಇದುವರೆಗೆ 13 ಮಿಲಿಯನ್ ವೀಕ್ಷಣೆಗಳನ್ನು ಪಡೆದಿದೆ.

ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾದ ಈ ವೀಡಿಯೊದಲ್ಲಿ ಮುಂಗುಸಿ ಮತ್ತು ಹಾವಿನ ನಡುವಿನ ಕ್ರೂರ ಹೋರಾಟವನ್ನು ತೋರಿಸುತ್ತದೆ. ಆದರೆ ಈ ಘಟನೆ ಎಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ.

ಇನ್ನು ಹಾವು ಮುಂಗುಸಿ ದ್ವೇಷದ ಹಿಂದಿನ ವೈಜ್ಞಾನಿಕ ಕಾರಣಗನ್ನ ನೋಡುವುದಾದರೇ, ಮುಂಗುಸಿಗಳು ಪೊದೆಗಳ ಕೆಳಗೆ ಅಥವಾ ಹುಲ್ಲು ಗಾವಲುಗಳ ನಡುವೆ ಪೊಟರೆಗಳನ್ನು ನಿರ್ಮಿಸಿಕೊಂಡು ಆ ಪೊಟರೆಗಳಲ್ಲೇ ವಾಸಮಾಡುತ್ತವೆ, ಹಾಗೂ ತಮ್ಮ ಮರಿಗಳನ್ನು ಪೊಟರೆಯ ಒಳಗೆ ಕೆಲದಿನಗಳ ಕಾಲ ಆರೈಕೆ ಮಾಡುತ್ತವೆ.

ಮುಂಗುಸಿಗಳು ನಿರ್ಮಿಸಿದ ಪೊಟರೆಗಳನ್ನು ಕಂಡ ತಕ್ಷಣವೇ ಅದರೊಳಗೆ ಹೊಕ್ಕು ಅದರೊಳಗಿರುವ ಚಿಕ್ಕ ಚಿಕ್ಕ ಮರಿಗಳನ್ನು ತಿನ್ನುವುದು ಹಾವಿನ ಜನ್ಮ ದತ್ತ ಗುಣ.ಹಾಗೂ ಸಾಮಾನ್ಯವಾಗಿ ಇಂತಹಾ ಪೊಟರೆಯೊಳಗೆ ತಾನೂ ಸಹಾ ವಾಸಿಸಲೂ ಹವಣಿಸುವುದೂ ಸಹಾ ಹಾವಿನ ಮೂಲ ಗುಣಗಳಲ್ಲೊಂದಾಗಿದೆ.

ಮುಂಗುಸಿಯು ತನ್ನ ಸಂತಾನವನ್ನು ನಾಶಮಾಡುವಲ್ಲಿ ಮುಂಚೂಣಿಯಲ್ಲಿರು ಹಾವುಗಳ ಬಗ್ಗೆ ತಲೆ ಮಾರುಗಳಿಂದಲೂ ಎಚ್ಚರಿಕೆಯಿಂದಿರುತ್ತವೆ. ಹಾವುಗಳು ಹೊಕ್ಕದ ಮುಂಗುಸಿಯ ಬಿಲಗಳೇ ಇಲ್ಲ ಎಂದು ಹೇಳಬಹುದು .

ಹೀಗೆ ತನ್ನ ಜೀವಿತಾವದಿಯ ಶತೃವಾದ ಹಾವುಗಳನ್ನು ಮುಂಗುಸಿಗಳು ದ್ವೇಷಿಸುತ್ತಲೇ ಇರುತ್ತವೆ.. ಆದರೆ ಹಾವು ಮುಂಗುಸಿಗಳನ್ನು ದ್ವೇಷಿಸುವ ಬದಲಾಗಿ ಮುಂಗುಸಿಗಳು ನಿರ್ಮಿಸಿರುವ ಪೊಟರೆಗಳಲ್ಲಿ ಠಿಕಾಣಿ ಹೂಡಲು ಹಾಗೂ ಅವುಗಳ ಮರಿಗಳನ್ನು ತಿನ್ನಲು ಹವಣಿಸುತ್ತಿರುತ್ತದೆ.

ಹಾವಿನ ಬಗ್ಗೆ ಸದಾ ಎಚ್ಚರಿಕೆಯಿಂದಿರುವ ಮುಂಗುಸಿಯು ಹಾವನ್ನು ಕಂಡ ತಕ್ಷಣ ಅಥವಾ ಹಾವಿನ ಚಲನೆಯ ಶಬ್ದವನ್ನು ಕೇಳಿದ ತಕ್ಷಣ ಅಥವಾ ತನ್ನ ಮರಿಗಳು ಸೂಚಿಸುವ ಅಪಾಯದ ಸಂಜ್ಞೆಗಳನ್ನು ತಿಳಿದ ತಕ್ಷಣವೇ ಜಾಗರೂಕವಾಗಿ ಹಾವಿನ ಮೇಲೆ ದಾಳಿಗಿಳಿಯುತ್ತದೆ.

ಹಾವಿನ ಕಡಿತದಿಂದ ಪಾರಾಗಲು ಮುಂಗುಸಿಯು ಬಹಳ ಚಾಕಚಕ್ಯತೆಯಿಂದ ಹೋರಾಡುತ್ತದೆ. ಕೆಲವೇ ಸಮಯದಲ್ಲಿ ಹಾವಿನ ದೇಹದ ಯಾವುದಾದರೊಂದು ಭಾಗವನ್ನು ತನ್ನ ಹಲ್ಲುಗಳಿಂದ ಬಲವಾಗಿ ಕಚ್ಚಿ ಹಾವಿಗೆ ಭಯವನ್ನು ಉಂಟು ಮಾಡುತ್ತದೆ.

ಒಂದು ವೇಳೆ ಹಾವಿನ ಕಡಿತಕ್ಕೆ ಮುಂಗುಸಿಯೇ ಒಳಗಾದರೆ ಹಾವಿನ ವಿಷದಿಂದ ಪಾರಾಗುವ ಸಸ್ಯವನ್ನು ತಿಂದು ಬಚಾವಾಗುತ್ತದೆ ಎಂದೂ ಸಹಾ ಹೇಳಲಾಗುತ್ತದೆ. ಆದರೇ ಹಾವಿನ ಕಡಿತಕ್ಕೆ ಒಳಪಡದೆ ದಾಳಿಮಾಡುವ ಕೌಶಲ್ಯವನ್ನು ಮುಂಗುಸಿಗಳು ರೂಡಿಸಿಕೊಂಡಿರುತ್ತವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು