ನವದೆಹಲಿ: ಪ್ರೀಮಿಯಂ ರೈಲು ವಂದೇ ಭಾರತ್ ಎಕ್ಸ್ಪ್ರೆಸ್ನಲ್ಲಿ ಹಾಳಾದ ಆಹಾರವನ್ನು ಪ್ರಯಾಣಿಕರಿಗೆ ನೀಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಇಂಡಿಯನ್ ರೈಲ್ವೇ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ಕೋಪಗೊಂಡು ಸೇವಾ ಪೂರೈಕೆದಾರರಿಗೆ 25,0000 ರೂಪಾಯಿ ದಂಡ ವಿಧಿಸಿದೆ ಎಂದು ತಿಳಿದು ಬಂದಿದೆ. ಈ ವಿಡಿಯೋದಲ್ಲಿ ಪ್ರಯಾಣಿಕರು ಸಿಬ್ಬಂದಿಗೆ ಆಹಾರವನ್ನು ವಾಪಸ್ ತೆಗೆದುಕೊಂಡು ಹೋಗುವಂತೆ ಕೇಳುತ್ತಿದ್ದಾರೆ.
ಕೆಲವು ದಿನಗಳ ಹಿಂದೆ ಆಕಾಶ್ ಕೇಶಾರಿ ಎಂಬ ಬಳಕೆದಾರರು ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದರು. ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಟ್ಯಾಗ್ ಮಾಡಿ, ಸರ್ ನಾನು ಹೊಸದಿಲ್ಲಿಯಿಂದ ಬನಾರಸ್ಗೆ ರೈಲು ಸಂಖ್ಯೆ 22416 ಮೂಲಕ ಪ್ರಯಾಣಿಸುತ್ತಿದ್ದೆ. ಈ ರೈಲಿನಲ್ಲಿ ನಮಗೆ ಬಡಿಸಿದ ಆಹಾರವು ತುಂಬಾ ಕೆಟ್ಟ ವಾಸನೆ ಬೀರುತ್ತಿದೆ. ಆಹಾರದ ಗುಣಮಟ್ಟವೂ ತುಂಬಾ ಕೆಟ್ಟದಾಗಿತ್ತು. ದಯವಿಟ್ಟು ನನ್ನ ಎಲ್ಲಾ ಹಣವನ್ನು ಹಿಂತಿರುಗಿಸಿ. ಈ ಮಾರಾಟಗಾರರು ವಂದೇ ಭಾರತ್ ಬ್ರಾಂಡ್ ಹೆಸರನ್ನು ಹಾಳು ಮಾಡುತ್ತಿದ್ದಾರೆ ಎಂದು ಬರೆದುಕೊಂಡಿದ್ದರೆ.
@indianrailway__ @AshwiniVaishnaw @VandeBharatExp Hi sir I am in journey with 22416 from NDLS to BSB. Food that was served now is smelling and very dirty food quality. Kindly refund my all the money.. These vendor are spoiling the brand name of Vande Bharat express . pic.twitter.com/QFPWYIkk2k
— Akash Keshari (@akash24188) January 6, 2024