News Karnataka Kannada
Sunday, April 28 2024
ದೆಹಲಿ

ಮೋದಿ ಗರ್ಬಾ ನೃತ್ಯ ಮಾಡುತ್ತಿರೋ ವಿಡಿಯೋ ವೈರಲ್‌: ವಾರ್ನಿಂಗ್‌ ಕೊಟ್ಟ ಪಿಎಂ

Video of PM Modi dancing garba goes viral, warns PM Modi
Photo Credit : News Kannada

ನವದೆಹಲಿ: ರಶ್ಮಿಕಾ ಮಂದಣ್ಣ, ಕತ್ರಿನಾ ಕೈಫ್, ಕಾಜೋಲ್ ಆಯ್ತು. ಇದೀಗ ಪ್ರಧಾನಿ ಮೋದಿ ಅವರ ಡೀಪ್ ಫೇಕ್‌ ವಿಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಎಐ ಟೆಕ್ನಾಲಜಿಸ್ ಬಳಸಿ ಮೋದಿಯವರ  ಗರ್ಬಾ ನೃತ್ಯ ಮಾಡುತ್ತಿರೋ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡಲಾಗಿದೆ.

ಈ ಡೀಪ್‌ ಫೇಕ್‌ ವಿಡಿಯೋಗಳನ್ನ ಖುದ್ದು ಪ್ರಧಾನಿ ಮೋದಿ ಅವರೂ ಗಮನಿಸಿದ್ದಾರೆ. ಇಂದು ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ದೀಪಾವಳಿ ಮಿಲನ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಎಐ ದುರುಪಯೋಗ ನಡೆಯುತ್ತಿರುವ ಬಗ್ಗೆ ಜನರಲ್ಲಿ ಮಾಹಿತಿ ನೀಡಬೇಕು ಎಂದು ಕರೆ ಕೊಟ್ಟಿದ್ದಾರೆ. ನಕಲಿ ಮತ್ತು ನೈಜ ಕ್ಲಿಪ್‌ಗಳ ನಡುವೆ ವ್ಯತ್ಯಾಸವನ್ನು ಕಂಡು ಹಿಡಿಯುವುದು ಕಷ್ಟಕರವಾಗಿದೆ. ನನ್ನದೇ ವಿಡಿಯೋ ಅತ್ಯಂತ ನೈಜ ರೀತಿಯಲ್ಲಿ ಎಡಿಟ್ ಮಾಡಲಾಗಿದೆ. ಚಿಕ್ಕಂದಿನಿಂದಲೂ ನಾನು  ಗರ್ಬಾ ನೃತ್ಯ ಆಡಿಲ್ಲ.

ಆದರೆ ಎಐ ಬಳಸಿ ಫೋಟೋ ಎಡಿಟ್ ಮಾಡಲಾಗಿದೆ. ಇದೇ ರೀತಿ ಬೇರೆಯವರ ಫೋಟೋ ಕೂಡ ಎಡಿಟ್ ಆಗಬಹುದು ಈ ಬಗ್ಗೆ ಎಚ್ಚರಿಕೆ ವಹಿಸಬೇಕು. ಡೀಪ್‌ ಫೇಕ್‌ಗಳಿಗಾಗಿ ಕೃತಕ ಬುದ್ಧಿಮತ್ತೆಯ ದುರುಪಯೋಗದ ಬಗ್ಗೆ ನಾಗರಿಕರು ಮತ್ತು ಮಾಧ್ಯಮಗಳು ಬಹಳ ಜಾಗರೂಕರಾಗಿರಬೇಕು ಎಂದು ಮೋದಿ ಹೇಳಿದ್ದಾರೆ. ಜತೆಗೆ ಕ್ರಮಕ್ಕೆ ಚಾಟ್‌ಜಿಪಿಟಿ ಗೆ ಖಡಕ್‌ ಸಂದೇಶ ರವಾನಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು