News Karnataka Kannada
Monday, April 29 2024
ದೆಹಲಿ

ಕನಿಷ್ಠ ಮೂರು ರಾಜ್ಯಗಳಲ್ಲಿ ಬಿಜೆಪಿ ಗೆಲ್ಲುತ್ತದೆ: ಪಿಯೂಷ್ ಗೋಯಲ್

BJP will win in at least three states: Piyush Goyal
Photo Credit : News Kannada

ದೆಹಲಿ: ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ಅಮೆರಿಕದಲ್ಲಿದ್ದರೂ ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಬಗ್ಗೆ ಗಮನ ಹರಿಸಿದ್ದಾರೆ.

ಚುನಾವಣಾ  ಕುರಿತು ಮಾಧ್ಯಮದವರ ಜೊತೆ ಮಾತನಾಡಿದ ಪಿಯೂಷ್ ಗೋಯಲ್, ಕಾಂಗ್ರೆಸ್ ಆಡಳಿತವಿರುವ ರಾಜಸ್ಥಾನದಲ್ಲಿ ಬಿಜೆಪಿ ಪ್ರಚಂಡ ಗೆಲುವು ಸಾಧಿಸುವ ವಿಶ್ವಾಸವಿದೆ,  ಛತ್ತೀಸ್‌ಗಢದಲ್ಲಿ ಸ್ಪಷ್ಟವಾಗಿ ಮುಂದಿದೆ” ಮತ್ತು ಮಧ್ಯಪ್ರದೇಶ ಬಿಜೆಪಿ ತೆಕ್ಕೆಗೆ ಬೀಳಲಿದೆ ಎಂದಿದ್ದಾರೆ.

“ನಾವು ಛತ್ತೀಸ್‌ಗಢದಲ್ಲಿ ನೋಡುತ್ತಿರುವುದು ತುಂಬಾ ಸ್ಪಷ್ಟವಾಗಿದೆ, ಟಿವಿ ಮತ್ತು ಎಕ್ಸ್ ನೋಡಿದರೆ ಛತ್ತೀಸ್‌ಗಢದಲ್ಲಿ ಟ್ರೆಂಡ್ ಬದಲಾಗಿದ್ದು ನಾವು ಕಾಂಗ್ರೆಸ್‌ಗಿಂತ ಸ್ಪಷ್ಟವಾಗಿ ಮುಂದಿದ್ದೇವೆ. ನಾವು ರಾಜಸ್ಥಾನದಲ್ಲಿ ಅತ್ಯಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ. ಮಧ್ಯಪ್ರದೇಶ ಮತ್ತು ಛತ್ತೀಸ್ ಗಢದಲ್ಲಿ ಬಿಜೆಪಿ ಗೆಲುವುದು ನಿಶ್ಚಿತ ಎಂದು ಹೇಳಿದ್ದಾರೆ.

ಭಾರತಕ್ಕೆ ಮರಳಿದ ನಂತರವೇ ತೆಲಂಗಾಣ ಪರಿಸ್ಥಿತಿ ಬಗ್ಗೆ ಹೇಳಬಹುದು. ಮಿಜೋರಾಂ ವಿಷಯದಲ್ಲಿ ಸ್ಪಷ್ಟ ಅಭಿಪ್ರಾಯಗಳು ಕೇಳಿಬಂದಿಲ್ಲ. ನಾವು ವ್ಯಾಪಕವಾಗಿ ಪ್ರಚಾರ ನಡೆಸಿದ್ದ ರಾಜಸ್ಥಾನ, ಛತ್ತೀಸ್‌ಗಢ ಮತ್ತು ಮಧ್ಯಪ್ರದೇಶ – ಕನಿಷ್ಠ ಮೂರು ರಾಜ್ಯಗಳಲ್ಲಿ ಬಿಜೆಪಿ ಗೆಲ್ಲುತ್ತದೆ ಎಂದು ಗೋಯಲ್ ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು