News Karnataka Kannada
Friday, May 03 2024
ದೆಹಲಿ

ವಾಟ್ಸಾಪ್ ಚಾನೆಲ್ ಪ್ರಾರಂಭಿಸಿದ “ಯುಜಿಸಿ”

UGC launches WhatsApp channel
Photo Credit : Facebook

ದೆಹಲಿ: ವಿಶ್ವವಿದ್ಯಾನಿಲಯ ಧನಸಹಾಯ ಆಯೋಗವು (ಯುಜಿಸಿ) ಶಿಕ್ಷಣಕ್ಕೆ ಸಂಬಂಧಿಸಿದ ಎಲ್ಲಾ ಪಾಲುದಾರರೊಂದಿಗೆ ಸಂಪರ್ಕದಲ್ಲಿರಲು ಯುಜಿಸಿ ಇಂಡಿಯಾ ವಾಟ್ಸಾಪ್ ಚಾನೆಲ್ ಅನ್ನು ಪ್ರಾರಂಭಿಸಿದೆ.

ಉನ್ನತ ಶಿಕ್ಷಣ ಸಂಸ್ಥೆಗಳು (HIE ಗಳು), ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಇತರರು ಈ ವಾಟ್ಸಾಪ್ ಚಾನೆಲ್ ಮೂಲಕ ಸಂಪರ್ಕದಲ್ಲಿರಬಹುದು. ಉಪಯುಕ್ತ ಮಾಹಿತಿಗಳು ಬಹಳ ಬೇಗ ನಿಮಗೆ ಸಿಗುತ್ತದೆ. ಇದರಿಂದ ಹಲವರಿಗೆ ಸಹಾಯವಾಗಲಿದೆ.

ಈ ಕುರಿತು ಮಾತನಾಡಿದ ಯುಜಿಸಿ ಅಧ್ಯಕ್ಷ ಎಂ ಜಗದೇಶ್ ಕುಮಾರ್, ಯುಜಿಸಿ ಇಂಡಿಯಾ ವಾಟ್ಸಾಪ್ ಚಾನೆಲ್‌ನ ಉನ್ನತ ಶಿಕ್ಷಣವನ್ನು ಹೆಚ್ಚಿನ ಹಂತದಲ್ಲಿ ವಿದ್ಯಾರ್ಥಿಗಳಿಗೆ ಹತ್ತಿರ ಮಾಡುವ ದೃಷ್ಟಿಯಿಂದ ಇದನ್ನು ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮೂಲಕ ಮತ್ತು ವ್ಯಾಪಕವಾಗಿ ಬಳಸಲಾಗುವ ವೇದಿಕೆಯನ್ನು ನಾವೂ ಸಹ ಬಳಸುತ್ತೇವೆ. ಈ ಮೂಲಕ ಯುಜಿಸಿ ತನ್ನ ಸಂವಹನ ಕಾರ್ಯತಂತ್ರವನ್ನು ಆಧುನೀಕರಿಸುತ್ತಿದೆ ಎಂದು ಹೇಳಿದ್ದಾರೆ.

ಇದರಲ್ಲಿ ವಿದ್ಯಾರ್ಥಿಗಳಿಗೆ ಅಧಿಕೃತ ಜಾಲತಾಣದಲ್ಲಿ ಯಾವ ಮಾಹಿತಿ ಲಭಿಸುತ್ತಿತ್ತೋ ಆ ಎಲ್ಲಾ ಮಾಹಿತಿಗಳನ್ನೂ ಸಹ ನೀಡಲಾಗುತ್ತದೆ. ಕೇವಲ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಇತರರಿಗೂ ಇದು ಸಹಾಯವಾಗುತ್ತದೆ. ಶಿಕ್ಷಕರೂ ಸಹ ಮಾಹಿತಿಯನ್ನು ಅತಿ ಸರಳವಾಗಿ ಪಡೆದುಕೊಳ್ಳಬಹುದು ಎಂದು ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು