News Karnataka Kannada
Saturday, May 04 2024
ದೆಹಲಿ

ನಾಳೆ ವರ್ಷದ ಮೊದಲ ಸೂರ್ಯ ಗ್ರಹಣ : ಎಲ್ಲೆಲ್ಲಿ ಗೋಚರ ಇಲ್ಲಿದೆ ಮಾಹಿತಿ

2024 ವರ್ಷದ ಮೊದಲ ಸೂರ್ಯಗ್ರಹಣ ನಾಳೆ ಅಂದರೆ ಏಪ್ರಿಲ್ 8 ಸೋಮವಾರ ಸಂಭವಿಸುತ್ತಿದ್ದು, ಭಾರತದಲ್ಲಿ ಈ ಗ್ರಹಣ ಗೋಚರವಾಗುತ್ತಿಲ್ಲ ಎಂದು ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ
Photo Credit : NewsKarnataka

ನವದೆಹಲಿ:  2024 ವರ್ಷದ ಮೊದಲ ಸೂರ್ಯಗ್ರಹಣ ನಾಳೆ ಅಂದರೆ ಏಪ್ರಿಲ್ 8 ಸೋಮವಾರ ಸಂಭವಿಸುತ್ತಿದ್ದು, ಭಾರತದಲ್ಲಿ ಈ ಗ್ರಹಣ ಗೋಚರವಾಗುತ್ತಿಲ್ಲ ಎಂದು ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.

ಚಂದ್ರನ ನೆರಳು ಪೂರ್ತಿಯಾಗಿ ಸೂರ್ಯನ ಮೇಲೆ ಬಿದ್ದಾಗ ಸಂಪೂರ್ಣ ಸೂರ್ಯಗ್ರಹಣ ಸಂಭವಿಸುತ್ತದೆ. ಇದರ ಪರಿಣಾಮವಾಗಿ ಸೂರ್ಯನ ಬೆಳಕು ಭೂಮಿಯ ಮೇಲೆ ಬೀಳುವುದನ್ನು ತಡೆಯುತ್ತದೆ. ಚಂದ್ರನ ನೆರಳು ಭೂಮಿಯ ಮೇಲ್ಮೈಯಲ್ಲಿ ವೇಗವಾಗಿ ಚಲಿಸುವಾಗ ಸೂರ್ಯಗ್ರಹಣ ಗೋಚರವಾಗುತ್ತದೆ. ಸೂರ್ಯನ ಹೊರ ಪದರ ಚಂದ್ರನ ಮೇಲೆ ಸುತ್ತುವರಿದು ಸುಂದರವಾದ ಪ್ರಭಾವಲಯದಂತೆ ಹೊಳೆಯುತ್ತದೆ. ಇದು ನಿರ್ದಿಷ್ಟ ಅವಧಿಯವರೆಗೆ ಮಾತ್ರ ಸಂಭವಿಸುತ್ತದೆ.

ಟೆಕ್ಸಾಸ್‌ನಲ್ಲಿ ಆರಂಭವಾಗಿ ಮೆಕ್ಸಿಕೋ, ಯುಕಾಟಾನ್ ಪೆನಿನ್ಸುಲಾ, ಗ್ವಾಟೆಮಾಲಾ, ಹೊಂಡಾರುಸ್, ನಿಕರಾಗುವಾ, ಕೋಸ್ಟರಿಕಾದಲ್ಲಿ ಗೋಚರಿಸಿತ್ತು. ಪನಾಮ, ಮಧ್ಯ ಅಮೆರಿಕ, ಉತ್ತರ ಅಮೆರಿಕ, ಕೊಲಂಬಿಯಾ ಮತ್ತು ಬ್ರೆಜಿಲ್‌ನಲ್ಲೂ ಗೋಚರಿಸುವುದರ ಜತೆಗೆ ಅಲಾಸ್ಕಾ ಮತ್ತು ಅರ್ಜೆಂಟೀನಾದಲ್ಲೂ ಗ್ರಹಣ ಸಂಭವಿಸಿತ್ತು. ಹೀಗಾಗಿ ಈ ಭಾಗದಲ್ಲಿ ಮಾತ್ರ ಗ್ರಹಣ ಪರಿಣಾಮ ಉಂಟಾಗಿದೆ. ಭಾರತದಲ್ಲಿ ಇದರ ಪರಿಣಾಮ ಇರುವುದಿಲ್ಲ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು