News Karnataka Kannada
Sunday, May 19 2024
ದೆಹಲಿ

ಪ್ರಪಂಚದಲ್ಲಿ ಇನ್ನು ಏಳಲ್ಲ ಎಂಟು ಖಂಡ: ಝೀಲಾಂಡಿಯಾ ಖಂಡ ಕುತೂಹಲಗಳ ಆಗರ

There are not seven but eight continents in the world: Zealandia
Photo Credit : IANS

ನವದೆಹಲಿ: ನಾವು ಸಾಮಾನ್ಯವಾಗಿ ವಿಶ್ವದಲ್ಲಿರುವ ಖಂಡಗಳೆಷ್ಟು ಎಂದು ಕೇಳಿದಾಗ ಥಟ್‌ ಅಂತ ಹೇಳುವುದು ಏಳು ಅಂತ. ಅದನ್ನೀಗ ಬದಲಾಯಿಸಬೇಕಾದ ಕಾಲ ಬಂದಿದೆ. ಹೌದು 375 ವರ್ಷಗಳ ಹಿಂದೆ ಸಮುದ್ರದಾಳದಲ್ಲಿ ಕಾಣೆಯಾಗಿದ್ದ ಖಂಡವೊಂದನ್ನು ಭೂವಿಜ್ಞಾನಿಗಳು ಪತ್ತೆ ಹಚ್ಚಿದ್ದು, ಇದಕ್ಕೆ ಎಂಟನೇ ಖಂಡ ಎಂದು ಹೆಸರಿಸಿದ್ದಾರೆ.

ಇದು ವಿಶ್ವದ ಅತ್ಯಂತ ಚಿಕ್ಕ ಖಂಡವಾಗಿದೆ. ಈ ಹೊಸ ಖಂಡಕ್ಕೆ ಝೀಲಾಂಡಿಯಾ ಅಥವಾ ಟೆ ರಿಯ ಎ ಮೌಯಿ ಎಂಬ ಹೆಸರು ನೀಡಿದ್ದು, ಇದಕ್ಕಾಗಿಯೇ ಪರಿಷ್ಕರಿಸಿದ ಹೊಸ ನಕ್ಷೆಯೊಂದನ್ನು ಬಿಡುಗಡೆ ಮಾಡಿದ್ದಾರೆ. ಭೂ ವಿಜ್ಞಾನಿಗಳು ಮತ್ತು ಭೂಕಂಪಶಾಸ್ತ್ರಜ್ಞರ ತಂಡವೊಂದು ಖಂಡವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ. ಸಾಗರ ತಳದಿಂದ ತೆಗೆದುಕೊಂಡ ಬಂಡೆಯ ಮಾದರಿಗಳಿಂದ ಪಡೆದ ದತ್ತಾಂಶವನ್ನು ಬಳಸಿಕೊಂಡು ಸಂಶೋಧಕರು ಇದನ್ನು ಕಂಡುಕೊಂಡಿದ್ದಾರೆ. ಸಂಶೋಧನೆಯ ವಿವರಗಳನ್ನು ಟೆಕ್ಟೋನಿಕ್ಸ್‌ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ.

ಝೀಲಾಂಡಿಯಾ 1.89 ದಶಲಕ್ಷ ಚದರ ಮೈಲು (4.9 ದಶಲಕ್ಷ ಚದರ ಕಿ.ಮೀ) ವಿಶಾಲವಾಗಿದೆ. ಇದು ಮಡಗಾಸ್ಕರ್‌ನ ಗಾತ್ರಕ್ಕಿಂತ ಆರು ಪಟ್ಟು ದೊಡ್ಡದಾಗಿದೆ. ಹೊಸ ಖಂಡದ ಶೇ. 94ರಷ್ಟು ಭಾಗದಲ್ಲಿ ನೀರಿದ್ದು, ನ್ಯೂಜಿಲೆಂಡ್‌ನ‌ಂತೆಯೇ ಬೆರಳೆಣಿಕೆಯಷ್ಟು ದ್ವೀಪಗಳನ್ನು ಹೊಂದಿದೆ. 2021ರಲ್ಲೇ ವಿಜ್ಞಾನಿಗಳು ಇಂಥದ್ದೊಂದು ಖಂಡವಿದೆ ಎಂದು ಹೇಳಿದ್ದರೂ ಅದನ್ನು ಅಧಿಕೃತವಾಗಿ ಗುರುತಿಸಿರಲಿಲ್ಲ.

ವಿಜ್ಞಾನಿಗಳು ಹೇಳುವಂತೆ ಝೀಲಾಂಡಿಯಾವನ್ನು ಅಧ್ಯಯನ ಮಾಡುವುದು ಕಷ್ಟಕರವಾಗಿದೆ. ಸದ್ಯ ವಿಜ್ಞಾನಿಗಳು ಸಮುದ್ರದ ತಳದಿಂದ ತರಲಾದ ಬಂಡೆಗಳು ಮತ್ತು ಕೆಸರಿನ ಮಾದರಿಗಳ ಸಂಗ್ರಹಗಳನ್ನು ಅಧ್ಯಯನ ಮಾಡುತ್ತಿದ್ದಾರೆ. ಜತೆಗೆ ತೀರದ ಕೆಲವೊಂದು ಸಣ್ಣಪುಟ್ಟ ಕಲ್ಲುಗಳನ್ನೂ ಅಧ್ಯಯನಕ್ಕೆ ಬಳಸಿಕೊಳ್ಳಲಾಗಿದೆ. ಇದರಿಂದ ಬಂದ ದತ್ತಾಂಶವನ್ನು ಬಳಸಿಕೊಂಡು ಹೊಸ ಖಂಡದ ಬಗ್ಗೆ ಮಾಹಿತಿ ಒದಗಿಸಲಾಗಿದೆ. ಝೀಲಾಂಡಿಯಾ ಮೂಲತಃ ಗೊಂಡ್ವಾನಾದ ಪ್ರಾಚೀನ ಸೂಪರ್‌ ಖಂಡದ ಭಾಗವಾಗಿತ್ತು. ಇದು ಸುಮಾರು 550 ದಶಲಕ್ಷ ವರ್ಷಗಳ ಹಿಂದೆ ರೂಪುಗೊಂಡಿದ್ದು, ಮೂಲ ಭೂತವಾಗಿ ದಕ್ಷಿಣ ಗೋಳಾರ್ಧದ ಎಲ್ಲ ಭೂಮಿಯನ್ನು ಒಟ್ಟುಗೂಡಿಸಿತ್ತು ಎಂದು ಸಂಶೋಧಕರು ಹೇಳುತ್ತಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು