News Karnataka Kannada
Saturday, May 04 2024
ಮಂಗಳೂರು

ಅತ್ತಾವರ ಕೆಎಂಸಿ ಆಸ್ಪತ್ರೆಯಲ್ಲಿ ನವಜಾತ ಶಿಶುವಿನ ಅಪರೂಪದ ಹೃದಯ ಗಡ್ಡೆಗೆ ಯಶಸ್ವಿ ಶಸ್ತ್ರಚಿಕಿತ್ಸೆ

ಮಂಗಳೂರಿನ ಅತ್ತಾವರದಲ್ಲಿರುವ ಕೆಎಂಸಿ ಆಸ್ಪತ್ರೆಯ ಆಂಕಾಲಜಿ ಕೇಂದ್ರವು ಗಮನಾರ್ಹ ಸಾಧನೆಯೊಂದನ್ನು ದಾಖಲಿಸುವ ಮೂಲಕ ವೈದ್ಯಕೀಯ ಉತ್ಕøಷ್ಟತೆಯ ಅಸಾಮಾನ್ಯ ಸಮೂಹ ಪ್ರಯತ್ನ ಮತ್ತು ಪ್ರಾವೀಣ್ಯವನ್ನು ಮೆರೆದಿದೆ. ಪೆರಿಕಾರ್ಡಿಯಲ್ ಟೆರಟೋಮಾ ಎಂಬ ಅಪರೂಪದ ಹೃದಯ ಗಡ್ಡೆಯನ್ನು ಹೊಂದಿದ್ದ ನವಜಾತ ಶಿಶುವಿಗೆ ಆಸ್ಪತ್ರೆಯ ಪರಿಣತ ವೈದ್ಯಕೀಯ ತಂಡವು ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿದೆ.
Photo Credit : NewsKarnataka

ಮಂಗಳೂರು: ನಗರದ  ಅತ್ತಾವರದಲ್ಲಿರುವ ಕೆಎಂಸಿ ಆಸ್ಪತ್ರೆಯ ಆಂಕಾಲಜಿ ಕೇಂದ್ರವು ಗಮನಾರ್ಹ ಸಾಧನೆಯೊಂದನ್ನು ದಾಖಲಿಸುವ ಮೂಲಕ ವೈದ್ಯಕೀಯ ಉತ್ಕøಷ್ಟತೆಯ ಅಸಾಮಾನ್ಯ ಸಮೂಹ ಪ್ರಯತ್ನ ಮತ್ತು ಪ್ರಾವೀಣ್ಯವನ್ನು ಮೆರೆದಿದೆ. ಪೆರಿಕಾರ್ಡಿಯಲ್ ಟೆರಟೋಮಾ ಎಂಬ ಅಪರೂಪದ ಹೃದಯ ಗಡ್ಡೆಯನ್ನು ಹೊಂದಿದ್ದ ನವಜಾತ ಶಿಶುವಿಗೆ ಆಸ್ಪತ್ರೆಯ ಪರಿಣತ ವೈದ್ಯಕೀಯ ತಂಡವು ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿದೆ.

ಆಮ್ಲಜನಕ ಮಟ್ಟವು ಶೇ. 40ಕ್ಕೆ ಕುಸಿದಿದ್ದುದರಿಂದ ಈ ಶಿಶು ಜನಿಸಿದ ತಕ್ಷಣವೇ ಚಿಕಿತ್ಸೆ ಒದಗಿಸುವುದು ಅನಿವಾರ್ಯವಾಗಿತ್ತು. ಹಿರಿಯ ಶಿಶು ಶಸ್ತ್ರಚಿಕಿತ್ಸಾ ತಜ್ಞ ಡಾ| ಸದಾಶಿವ ರಾವ್ ಪಲ್ಲದೆ ಅವರ ನೇತೃತ್ವದಲ್ಲಿ ಸರ್ಜಿಕಲ್ ಆಂಕಾಲಜಿಸ್ಟ್ ಡಾ| ಅರವಿಂದ ಎನ್., ನವಜಾತ ಶಿಶು ತಜ್ಞೆ ಡಾ| ಲಕ್ಷ್ಮಿ ಕಾಮತ್, ಹಿರಿಯ ಅರಿವಳಿಕೆ ಶಾಸ್ತ್ರಜ್ಞ ಡಾ| ಸುಮೇಶ್ ರಾವ್, ಡಾ| ಕಮಲಾಕ್ಷಿ ಭಟ್, ಡಾ| ನೂತನ್ ಕಾಮತ್ ಅವರನ್ನು ಒಳಗೊಂಡ ಬಹು ವಿಭಾಗೀಯ ವೈದ್ಯರ ತಂಡವು ಮಕ್ಕಳ ತಜ್ಞರು, ಶಸ್ತ್ರಚಿಕಿತ್ಸಾ ಕೊಠಡಿಯ ಸಿಬ್ಬಂದಿಗಳು ಮತ್ತು ನವಜಾತ ಶಿಶು ತೀವ್ರ ನಿಗಾ ಘಟಕದ ಸಿಬ್ಬಂದಿಗಳ ಸಹಕಾರದಲ್ಲಿ ಕಾರ್ಯಾಚರಣೆಗೆ ಮುಂದಾಯಿತು.

ಪೆರಿಕಾರ್ಡಿಯೋಸೆಂಟೆಸಿಸ್‍ನಿಂದ ಶಿಶುವಿನ ಪೆರಿಕಾರ್ಡಿಯಲ್ ಸ್ಯಾಕ್‍ನಿಂದ 150 ಮಿ. ಲೀಟರ್‍ಗಳಷ್ಟು ದ್ರವಾಂಶವನ್ನು ಹೊರತೆಗೆಯುವ ಮೂಲಕ ಶಿಶುವಿನ ಸ್ಥಿತಿಯನ್ನು ಸಾಕಷ್ಟು ಸುಧಾರಣೆಗೊಳಿಸಲಾಯಿತು. ಆ ಬಳಿಕ ಸಿಟಿ-ಸ್ಕ್ಯಾನ್‍ನಂತಹ ತಪಾಸಣೆಗಳನ್ನು ನಡೆಸಿದಾಗ ದೊಡ್ಡ ಗಾತ್ರದ ಗಡ್ಡೆಯು ಶಿಶುವಿನ ಹೃದಯ ಮತ್ತು ಪ್ರಧಾನ ರಕ್ತನಾಳಗಳ ಮೇಲೆ ಒತ್ತಡ ಹೇರುತ್ತಿರುವುದು ತಿಳಿದುಬಂದು ಗಡ್ಡೆಯನ್ನು ನಿವಾರಿಸಲು ಸಂಕೀರ್ಣ ಶಸ್ತ್ರಚಿಕಿತ್ಸೆ ನಡೆಸುವುದು ಅನಿವಾರ್ಯವಾಯಿತು. ಇಂತಹ ಪ್ರಕರಣಗಳು ಅಪರೂಪ ಮತ್ತು ಶಸ್ತ್ರಚಿಕಿತ್ಸೆ ತುಂಬಾ ಸಂಕೀರ್ಣ ಎಂಬುದರ ಹೊರತಾಗಿಯೂ ಮಗು ಗುಣಮುಖವಾಗುವಲ್ಲಿ ಅತ್ಯಾವಶ್ಯಕ ಹೆಜ್ಜೆಯಾಗಿರುವ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಯಿತು. ಜತೆಗೆ ನಿರ್ದಿಷ್ಟವಾಗಿ ಸೋಂಕು ನಿಯಂತ್ರಣದತ್ತ ಗಮನ ಕೇಂದ್ರೀಕರಿಸಿ ತೀವ್ರತರಹ ಮತ್ತು ಸವಾಲಾಗಿರುವ ಶಸ್ತ್ರಚಿಕಿತ್ಸೆಯ ಬಳಿಕದ ಆರೈಕೆ ಹಂತವನ್ನೂ ನಿರ್ವಹಿಸಲಾಯಿತು.

ಡಾ| ಸದಾಶಿವ ರಾವ್ ಪಲ್ಲದೆ ಅವರು ಈ ಸವಾಲೆನಿಸುವ ಪ್ರಕರಣವನ್ನು ಯಶಸ್ವಿಯಾಗಿ ನಿರ್ವಹಿಸಿರುವ ಬಗ್ಗೆ ತುಂಬು ಹರ್ಷವನ್ನು ವ್ಯಕ್ತಪಡಿಸಿದ್ದು, ವೈದ್ಯಕೀಯ ಸಮೂಹದ ಸದಸ್ಯರ ಸೀಮಾರಹಿತ ಸಹಯೋಗ ಮತ್ತು ಅತ್ಯುತ್ಕøಷ್ಟ ದರ್ಜೆಯ ವೈದ್ಯಕೀಯ ಚಿಕಿತ್ಸಾ ಕ್ರಮಗಳ ಅಳವಡಿಕೆಯೊಂದಿಗೆ ಇದು ಸಾಧ್ಯವಾಯಿತು ಎಂದಿದ್ದಾರೆ. ನವಜಾತ ಶಿಶುವೊಂದರ ಹೃದಯದಲ್ಲಿದ್ದ ಗಡ್ಡೆಗೆ ಚಿಕಿತ್ಸೆ ಒದಗಿಸಿರುವ ಈ ಪ್ರಕರಣವು ಜಾಗತಿಕ ಮಟ್ಟದ ಯಶಸ್ವಿ ಉದಾಹರಣೆಗಳಲ್ಲಿ ಒಂದಾಗಿದ್ದು, ಸಮಗ್ರ ಕ್ಯಾನ್ಸರ್ ಆರೈಕೆಯಲ್ಲಿ ಕೆಎಂಸಿ ಆಸ್ಪತ್ರೆ ಅತ್ತಾವರವು ಮುಂಚೂಣಿಯಲ್ಲಿದೆ ಎಂಬುದಕ್ಕೂ ನಿದರ್ಶನವಾಗಿದೆ.

ಈ ವೈದ್ಯಕೀಯ ಮೈಲಿಗಲ್ಲು ಅತ್ತಾವರ ಕೆಎಂಸಿ ಆಸ್ಪತ್ರೆಯಲ್ಲಿ ಇತ್ತೀಚೆಗಷ್ಟೇ ಲೋಕಾರ್ಪಣೆಗೊಂಡಿರುವ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರದ ಮುಡಿಗೆ ಹೊಸ ಗರಿ ಎಂಬುದಾಗಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾಗಿರುವ ಡಾ| ಜಾನ್ ರಾಮಪುರಂ ಕೊಂಡಾಡಿದ್ದಾರೆ. ಈ ಸಾಧನೆಯು ಉತ್ಕøಷ್ಟ ರೋಗಿ ಆರೈಕೆ ಮತ್ತು ಗುಣಮುಖರಾಗುವ ಪರಿಸರದ ನಿರ್ಮಾಣದ ನಿಟ್ಟಿನಲ್ಲಿ ಅತ್ತಾವರ ಕೆಎಂಸಿ ಆಸ್ಪತ್ರೆಯ ಬದ್ಧತೆಗೆ ಇನ್ನೊಂದು ನಿದರ್ಶನ ಎಂದು ಅವರು ಹೇಳಿದ್ದಾರೆ. “ನವಜಾತ ಶಿಶುವಿನ ಹೃದಯದಲ್ಲಿದ್ದ ಗಡ್ಡೆಗೆ ಯಶಸ್ವಿಯಾಗಿ ಚಿಕಿತ್ಸೆ ಒದಗಿಸಿರುವುದು ನಮ್ಮ ಆಸ್ಪತ್ರೆಯ ಉತ್ಕøಷ್ಟ ವೈದ್ಯಕೀಯ ಸಾಮಥ್ರ್ಯ ಮತ್ತು ಸಹಾನುಭೂತಿಯ ರೋಗಿ ಆರೈಕೆ ಒದಗಿಸುವ ನಮ್ಮ ಬದ್ಧತೆಯನ್ನು ಉಲ್ಲೇಖಿಸುತ್ತದೆ. ರೋಗಿಗಳಿಗೆ ಪ್ರಶಾಂತ ಮತ್ತು ಗುಣಕಾರಿ ವಾತಾವರಣ ನಿರ್ಮಾಣದ ನಿಟ್ಟಿನಲ್ಲಿ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರ ಮತ್ತು ಬ್ಲಾಸಮ್ ಡೀಲಕ್ಸ್ ಕೊಠಡಿಗಳ ಉದ್ಘಾಟನೆಯು ಗಮನಾರ್ಹ ಹೆಜ್ಜೆಗಳು. ಈ ಹೊಸ ಕೇಂದ್ರವು ಅತ್ಯಾಧುನಿಕ ವೈದ್ಯಕೀಯ ತಂತ್ರಜ್ಞಾನಗಳನ್ನು ಹೊಂದಿದ್ದು, ಸಮಗ್ರ ಮತ್ತು ಎಲ್ಲರ ಕೈಗೆಟಕಬಲ್ಲ ವೈದ್ಯಕೀಯ ಆರೈಕೆಯನ್ನು ಒದಗಿಸುವ ನಮ್ಮ ಧ್ಯೇಯವನ್ನು ಪುನರ್‍ಸ್ಥಾಪಿಸಿವೆ” ಎಂದು ಅವರು ತಿಳಿಸಿದ್ದಾರೆ.

ಅಪರೂಪದ ಮತ್ತು ಸಂಕೀರ್ಣ ವೈದ್ಯಕೀಯ ಪ್ರಕರಣಗಳನ್ನು ಯಶಸ್ವಿಯಾಗಿ ನಿರ್ವಹಿಸುವಲ್ಲಿ ಅತ್ತಾವರ ಕೆಎಂಸಿ ಆಸ್ಪತ್ರೆಯು ಹೊಂದಿರುವ ಪರಿಣತಿಯನ್ನು ಈ ಸಾಧನೆಯು ಒತ್ತಿ ಹೇಳುತ್ತದೆಯಲ್ಲದೆ ಆಯುಷ್ಮಾನ್ ಭಾರತ್- ಆರೋಗ್ಯ ಕರ್ನಾಟಕ ಯೋಜನೆಯ ಮೂಲಕ ಎಲ್ಲರ ಕೈಗೆಟಕಬಲ್ಲಂತಹ ಆರೋಗ್ಯ ಸೇವೆಯನ್ನು ಒದಗಿಸುವ ಬದ್ಧತೆಗೆ ನಿದರ್ಶನವಾಗಿದೆ. ಯಶಸ್ವಿಯಾಗಿ ಚಿಕಿತ್ಸೆಗೆ ಒಳಪಟ್ಟು ಚೇತರಿಸಿಕೊಂಡಿರುವ ಶಿಶು ಈಗ ಆಸ್ಪತ್ರೆಯಿಂದ ಬಿಡುಗಡೆಗೊಳ್ಳಲು ಸಿದ್ಧವಾಗಿದ್ದು, ನಿಖರವಾದ ವೈದ್ಯಕೀಯ ಆರೈಕೆಯನ್ನು ಒದಗಿಸುವ ನಮ್ಮ ವೈದ್ಯಕೀಯ ತಂಡದ ಸಾಮೂಹಿಕ ಪ್ರಯತ್ನ ಮತ್ತು ಬದ್ಧತೆಗೆ ಸಾಕ್ಷಿಯಾಗಿದೆ,

ಹೆಚ್ಚುವರಿ ಮಾಹಿತಿ ಮತ್ತು ಮಾಧ್ಯಮ ವಿವರಣೆಗಳಿಗಾಗಿ ದಯವಿಟ್ಟು ಸಂಪರ್ಕಿಸಿ: ಕ್ಲಸ್ಟರ್ ಹೆಡ್ ಮಾರ್ಕೆಟಿಂಗ್, ದೂರವಾಣಿ: 7338625909, ಇಮೈಲ್: sachin.karanth@manipalhospitals.com

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು