ನವದೆಹಲಿ: ಅಯೋಧ್ಯೆಯಲ್ಲಿ ಭವ್ಯವಾದ ರಾಮ ಮಂದಿರ ಉದ್ಘಾಟನೆಗೆ ಕ್ಷಣಗಣನೆ ಶುರುವಾಗಿದೆ. ಬಾಲ ರಾಮನನ್ನು ಕಣ್ತುಂಬಿಕೊಳ್ಳಲು ಇಡೀ ದೇಶವೇ ಎದುರು ನೋಡುತ್ತಿದೆ.
ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಕೇಶವ್ ಮಹಾರಾಜ್ ಅವರು ರಾಮ ಮಂದಿರ ‘ಪ್ರಾಣ ಪ್ರತಿಷ್ಠಾ’ ಸಮಾರಂಭಕ್ಕೆ ದಕ್ಷಿಣ ಆಫ್ರಿಕಾದಲ್ಲಿರುವ ಭಾರತೀಯ ಸಮುದಾಯಕ್ಕೆ ಶುಭ ಕೋರಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.
ಎಲ್ಲರಿಗೂ ನಮಸ್ಕಾರ. ನಾಳೆ ( ಇಂದು) ಅಯೋಧ್ಯೆಯಲ್ಲಿ ರಾಮ ಮಂದಿರದ ಉದ್ಘಾಟನೆಗೆ ದಕ್ಷಿಣ ಆಫ್ರಿಕಾದಲ್ಲಿರುವ ನನ್ನ ಭಾರತೀಯ ಸಮುದಾಯಕ್ಕೆ ಶುಭ ಹಾರೈಸಲು ನಾನು ಬಯಸುತ್ತೇನೆ. ಎಲ್ಲರಿಗೂ ಶಾಂತಿ, ಸೌಹಾರ್ದತೆ ಮತ್ತು ಆಧ್ಯಾತ್ಮಿಕ ಜ್ಞಾನೋದಯವಾಗಲಿ. ಜೈ ಶ್ರೀ ರಾಮ್ ಎಂದು ದಕ್ಷಿಣ ಆಫ್ರಿಕಾದ ಆಟಗಾರ ಪೋಸ್ಟ್ ಮಾಡಿದ್ದಾರೆ.
Looking forward to the opening of the Ram Mandir in Ayodhya. May it bring peace and enlightenment to one and all. 🙏 @MaheshIFS pic.twitter.com/P8TGT8tteX
— Keshav Maharaj (@keshavmaharaj16) January 21, 2024