ನವದೆಹಲಿ: ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬ್ಯಾಂಕಾಕ್ ನಿಂದ ಬಂದಿಳಿದ ಪ್ರಯಾಣಿಕರೊಬ್ಬರ ಬಳಿ ಇದ್ದ 2 ಕೋಟಿ ರೂ. ಮೌಲ್ಯದ ಚಿನ್ನದ ಬಿಸ್ಕತ್ ಗಳನ್ನು ವಶಪಡಿಸಿಕೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಬ್ಯಾಂಕಾಕ್ ನಿಂದ ಬಂದ ವ್ಯಕ್ತಿಯ ಬ್ಯಾಗ್ ಪರಿಶೀಲನೆ ನಡೆಸಿದಾಗ ಎರಡು ಜ್ಯೂಸ್ ಪ್ಯಾಕೆಟ್ ಸಿಕ್ಕಿದ್ದು, ಅದು ದ್ರವರೂಪದ ಬದಲು ಭಾರವಾಗಿದ್ದರಿಂದ ಅನುಮಾನಗೊಂಡ ಅಧಿಕಾರಿಗಳು ತೆರೆದುನೋಡಿದಾಗ ಎರಡು ಪ್ಯಾಕೆಟ್ ಗಳಲ್ಲಿ 2.24 ಕೋಟಿ ರೂ. ಮೌಲ್ಯದ 4.204 ಕೆ.ಜಿ ಚಿನ್ನದ ಬಿಸ್ಕತ್ ಇರುವುದು ಪತ್ತೆಯಾಗಿತ್ತು.