News Karnataka Kannada
Monday, May 06 2024
ದೆಹಲಿ

ಥೈಲ್ಯಾಂಡ್‌ನಲ್ಲಿ ಗ್ಯಾಂಗ್ ಸ್ಟಾರ್ ರವಿ ಖಾನ್, ಆತನ ಗೆಳತಿ ಖಾಕಿ ಸೆರೆ

ದೆಹಲಿ-ಎನ್‌ಸಿಆರ್‌ ಪ್ರದೇಶದಲ್ಲಿ ಕಾರ್ಯನಿರ್ವಹಿಸುವ ಸ್ಕ್ರ್ಯಾಪ್ ಮೆಟಲ್ ಮಾಫಿಯಾ ತಂಡದ ಮುಖ್ಯಸ್ಥ ಮತ್ತು ಗ್ಯಾಂಗ್‌ಸ್ಟರ್‌ ರವಿ ಕಾನಾ ಹಾಗೂ ಆತನ ಗೆಳತಿ ಕಾಜಲ್ ಝಾ ಅವರನ್ನು ಥೈಲ್ಯಾಂಡ್‌ನಲ್ಲಿ ಬಂಧಿಸಲಾಗಿದೆ.
Photo Credit : NewsKarnataka

ನವದೆಹಲಿ: ದೆಹಲಿ-ಎನ್‌ಸಿಆರ್‌ ಪ್ರದೇಶದಲ್ಲಿ ಕಾರ್ಯನಿರ್ವಹಿಸುವ ಸ್ಕ್ರ್ಯಾಪ್ ಮೆಟಲ್ ಮಾಫಿಯಾ ತಂಡದ ಮುಖ್ಯಸ್ಥ ಮತ್ತು ಗ್ಯಾಂಗ್‌ಸ್ಟರ್‌ ರವಿ ಕಾನಾ ಹಾಗೂ ಆತನ ಗೆಳತಿ ಕಾಜಲ್ ಝಾ ಅವರನ್ನು ಥೈಲ್ಯಾಂಡ್‌ನಲ್ಲಿ ಬಂಧಿಸಲಾಗಿದೆ. ನೋಯ್ಡಾ ಪೊಲೀಸರು ಥೈಲ್ಯಾಂಡ್‌ ಪೊಲೀಸರೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು. ಕಾನಾಗೆ ಸಂಬಂಧಿಸಿದ ಎಲ್ಲ ವಿವರಗಳನ್ನು ಅವರಿಗೆ ನೀಡಿದ್ದರು. ಈ ಕಾರಣದಿಂದ ಇಬ್ಬರು ಸಿಕ್ಕಿಬಿದ್ದಿದ್ದಾರೆ. ಜನವರಿಯಲ್ಲಿ ಕಾನಾ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಕೂಡ ಜಾರಿ ಮಾಡಲಾಗಿತ್ತು.

ಸ್ಕ್ರ್ಯಾಪ್ ಡೀಲರ್ ಆಗಿದ್ದ ಕಾನಾ ದೆಹಲಿ-ಎನ್‌ಸಿಆರ್‌ ಪ್ರದೇಶದಲ್ಲಿ ಸ್ಕ್ರ್ಯಾಪ್ ವಸ್ತುಗಳನ್ನು ಅಕ್ರಮವಾಗಿ ಸ್ವಾಧೀನಪಡಿಸಿಕೊಳ್ಳಲು ಮತ್ತು ಮಾರಾಟ ಮಾಡಲು ಪ್ರಾರಂಭಿಸಿದ ಬಳಿಕ ಕೋಟ್ಯಧಿಪತಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. 2023ರ ಡಿಸೆಂಬರ್ 28ರಂದು ಕಾನಾ ವಿರುದ್ಧ ಸಾಮೂಹಿಕ ಅತ್ಯಾಚಾರ ಪ್ರಕರಣವೂ ದಾಖಲಾಗಿತ್ತು.

ಕಾನಾ ಮತ್ತು ಆತನ ಸಹಚರರ 120 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿರುವುದಾಗಿ ನೋಯ್ಡಾ ಪೊಲೀಸರು ಹೇಳಿದ್ದಾರೆ. ಕಾನಾ ತನ್ನ ಗೆಳತಿ ಕಾಜಲ್‌ ಝಾಗೆ ದಕ್ಷಿಣ ದೆಹಲಿಯ ಐಷರಾಮಿ ಏರಿಯಾ ನ್ಯೂ ಫ್ರೆಂಡ್ಸ್‌ ಕಾಲನಿಯಲ್ಲಿ ಮೂರು ಅಂತಸ್ತಿನ ಬಂಗಲೆಯನ್ನು ಉಡುಗೊರೆಯಾಗಿ ಕೊಡಿಸಿದ್ದ. ಅದರ ಬೆಲೆ ಬರೋಬ್ಬರಿ 100 ಕೋಟಿ ರೂ. ಜನವರಿಯಲ್ಲಿ ಪೊಲೀಸರು ಆ ಐಷಾರಾಮಿ ಬಂಗಲೆಯ ಮೇಲೆ ದಾಳಿ ಬೀಗ ಜಡಿದು ಸೀಲ್‌ ಹಾಕಿದ್ದರು. ಇದೀಗ ಇಬ್ಬರನ್ನು ಪೊಲೀಸ್‌ ವಶಕ್ಕೆ ಪಡೆದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು