News Karnataka Kannada
Monday, May 06 2024
ದೆಹಲಿ

ಐಸಿಎಸ್‌ಗೆ ಸೇರುವುದಾಗಿ ಇಚ್ಛೆ ವ್ಯಕ್ತಪಡಿಸಿದ್ದ ಐಐಟಿ ವಿದ್ಯಾರ್ಥಿ ಬಂಧನ

ಭಯೋತ್ಪಾದಕ ಸಂಘಟನೆ ಐಸಿಎಸ್‌ ಗೆ ಸೇರುವುದಾಗಿ ಇಚ್ಛೆ ವ್ಯಕ್ತಪಡಿಸಿದ್ದ ನಾಲ್ಕನೆ ವರ್ಷದ ಐಐಟಿ ವಿದ್ಯಾರ್ಥಿಯನ್ನು ಇದೀಗ ಪೊಲೀಸ್‌ ಅಧಿಕಾರಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Photo Credit : NewsKarnataka

ಗುವಾಹಟಿ: ಭಯೋತ್ಪಾದಕ ಸಂಘಟನೆ ಐಸಿಎಸ್‌ ಗೆ ಸೇರುವುದಾಗಿ ಇಚ್ಛೆ ವ್ಯಕ್ತಪಡಿಸಿದ್ದ ನಾಲ್ಕನೆ ವರ್ಷದ ಐಐಟಿ ವಿದ್ಯಾರ್ಥಿಯನ್ನು ಇದೀಗ ಪೊಲೀಸ್‌ ಅಧಿಕಾರಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವಿದ್ಯಾರ್ಥಿ ತಾನು ಭಯೋತ್ಫಾದಕ ಸಂಘಟನೆಗೆ ಸೇರಬೇಕೆಂದುಕೊಂಡಿದ್ದೇನೆ ಶೀಘ್ರವೇ ಈ ಕ್ಯಾಂಪಸ್​ನಿಂದ ಹೊರಗೆ ಹೋಗುತ್ತೇನೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದ. ಇ-ಮೇಲ್ ಸ್ವೀಕರಿಸಿದ ನಂತರ, ನಾವು ವಿಷಯಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಹೋದೆವು ಮತ್ತು ತನಿಖೆಯನ್ನು ಪ್ರಾರಂಭಿಸಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಂತರ, ಐಐಟಿ-ಗುವಾಹಟಿ ಅಧಿಕಾರಿಗಳನ್ನು ತಕ್ಷಣವೇ ಸಂಪರ್ಕಿಸಲಾಯಿತು, ಅವರು ಹೇಳಿದ ವಿದ್ಯಾರ್ಥಿಯು ಮಧ್ಯಾಹ್ನದಿಂದ ಕಾಣೆಯಾಗಿದ್ದಾನೆ ಮತ್ತು ಅವನ ಮೊಬೈಲ್ ಫೋನ್ ಸಹ ಸ್ವಿಚ್ಡ್​ ಆಫ್ ಆಗಿದೆ ಎಂದು ಹೇಳಿದ್ದರು.

ನಂತರ ಗಂಭೀರ ಹುಡುಕಾಟದ ಬಳಿಕಗುವಾಹಟಿಯಿಂದ ಸುಮಾರು 30 ಕಿ.ಮೀ ದೂರದಲ್ಲಿರುವ ಹಜೋ ಪ್ರದೇದಲ್ಲಿ ಸಂಜೆ ವೇಳೆಗೆ ಸ್ಥಳೀಯರ ನೆರವಿನಿಂದ ಆತನನ್ನು ಬಂಧಿಸಲಾಯಿತು ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.ದೆಹಲಿಯ ಓಖ್ಲಾದಿಂದ ಬಂದಿರುವ ವಿದ್ಯಾರ್ಥಿಯ ಹಾಸ್ಟೆಲ್ ಕೋಣೆಯಲ್ಲಿ ಕಪ್ಪು ಬಾವುಟವಿದ್ದು, ಕೆಲವು ಹಸ್ತಪ್ರತಿಗಳು ಪತ್ತೆಯಾಗಿವೆ. ಆತನ ಕೋಣೆಯಲ್ಲಿ ಇನ್ನು ಕೆಲವು ವಸ್ತುಗಳು ಪತ್ತೆಯಾಗಿದ್ದು ಅಲ್ಲದೇ ವಿಚಾರಣೆ ನಂತರ ಅವನು ಕೂಡ ಕೆಲವು ಮಾಹಿತಿಗಳನ್ನು ಬಾಯಿಬಿಟ್ಟಿದ್ದಾನೆ ಆದರೆ ಯಾವುದೇ ಮಾಹಿತಿ ಸದ್ಯಕ್ಕೆ ಬಹಿರಂಗ ಪಡಿಸಲಾಗುವದಿಲ್ಲ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು