ನವದೆಹಲಿ: ಕೇಂದ್ರ ಸರ್ಕಾರವು ವಿರೋಧ ಪಕ್ಷಗಳ ನಾಯಕರ ಐಫೋನ್ಗಳನ್ನು ಹ್ಯಾಕ್ ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಈ ವಿಚಾರವಾಗಿ ದೆಹಲಿಯಲ್ಲಿ ಮಾತನಾಡಿರುವ ಅವರು, ‘ದೇಶದಲ್ಲಿ ನಂಬರ್ ಒನ್ ಸ್ಥಾನದಲ್ಲಿರುವವರು ಪ್ರಧಾನಿ ಮೋದಿ, ನಂಬರ್ ಟು ಸ್ಥಾನದಲ್ಲಿರುವವರು ಅದಾನಿ ಹಾಗೂ ನಂಬರ್ ಥ್ರೀ ಸ್ಥಾನದಲ್ಲಿರುವವರು ಅಮಿತ್ ಶಾ ಎಂದು ನಾನು ಈ ಮೊದಲು ಭಾವಿಸಿದ್ದೆ. ಆದರೆ, ಇದು ತಪ್ಪೆಂದು ಈಗ ತಿಳಿದಿದೆ.
ನಾವು ಭಾರತದ ರಾಜಕೀಯವನ್ನು ಅರ್ಥಮಾಡಿಕೊಂಡಿದ್ದೇವೆ. ಈಗ ಅದಾನಿ ಜಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಈ ಕಾರಣಕ್ಕಾಗಿಯೇ ಗೊಂದಲದ ರಾಜಕೀಯ ನಡೆಯುತ್ತಿದೆ’ ಎಂದು ಹೇಳಿದ್ದಾರೆ. ‘ನನ್ನ ಕಚೇರಿಯಲ್ಲಿ ಹಲವಾರು ಜನರಿಗೆ ಈ ಸಂದೇಶ ಬಂದಿದೆ. ಕಾಂಗ್ರೆಸ್ನಲ್ಲಿ ಕೆಸಿ ವೇಣುಗೋಪಾಲ್, ಸುಪ್ರಿಯಾ ಸುಲೆ, ಪವನ್ ಖೇರಾ ಕೂಡ ಹ್ಯಾಕ್ ಸಂದೇಶಗಳನ್ನು ಸ್ವೀಕರಿಸಿದ್ದಾರೆ. ಬಿಜೆಪಿ ಯುವಕರ ಗಮನವನ್ನು ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ’ ಎಂದು ರಾಹುಲ್ ಆರೋಪಿಸಿದ್ದಾರೆ. ಅಲ್ಲದೆ ನೀವು ಎಷ್ಟು ಬೇಕಾದರೂ ಫೋನ್ ಟ್ಯಾಪಿಂಗ್ ಮಾಡಬಹುದು. ನಾನು ಹೆದರುವುದಿಲ್ಲ. ನೀವು ನನ್ನ ಫೋನ್ ತೆಗೆದುಕೊಳ್ಳಲು ಬಯಸಿದರೆ, ನಾನು ಅದನ್ನು ನಿಮಗೆ ಕೊಡುತ್ತೇನೆ.’ಇದು ಕ್ರಿಮಿನಲ್ಗಳು ಮತ್ತು ಕಳ್ಳರ ಕೆಲಸ’ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಗುಡುಗಿದ್ದಾರೆ.