ದೆಹಲಿ: ವಿಶ್ವ ಪ್ರಾಣಿ ದಿನದ ಸಂದರ್ಭದಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಇಂದು ತಮ್ಮ ಹೊಸ ಕುಟುಂಬದ ಸದಸ್ಯರನ್ನು ಪರಿಚಯಿಸಿದ್ದಾರೆ.
ಹೌದು ಇಂದು ರಾಹುಲ್ ಗಾಂಧಿ ಅವರು ತಮ್ಮ ತಾಯಿ ಸೋನಿಯಾ ಗಾಂಧಿಗೆ ಉಡುಗೊರೆ ರೂಪಾದಲ್ಲಿ ಮುದ್ದಾಗಿರುವ ನಾಯಿಮರಿಯೊಂದನ್ನು ನೀಡಿದ್ದಾರೆ. ಇದಕ್ಕೆ ನೂರಿ ಎಂದು ಹೆಸರಿಟ್ಟಿದ್ಧಾರೆ. ಇದು ಗೋವಾದಿಂದ ವಿಮಾನದಲ್ಲಿ ಇಲ್ಲಿಗೆ ಬಂದಿದೆ ಎಂದು ರಾಹುಲ್ ಹೇಳಿದ್ದಾರೆ.
ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ರಾಹುಲ್ ಗಾಂಧಿ ಅವರು ತಮ್ಮ ಇತ್ತೀಚಿನ ಗೋವಾ ಪ್ರವಾಸವನ್ನು ಹಂಚಿಕೊಂಡಿದ್ದಾರೆ. ಅಲ್ಲಿ ಅವರು ನೂರಿಯನ್ನು ಪಡೆದ ಗೋವಾ ಕುಟುಂಬವನ್ನು ಭೇಟಿಯಾದರು. ನಂತರ ಅವರು ನವದೆಹಲಿಯಲ್ಲಿರುವ ಅವರ ಮನೆಗೆ ಬಂದಿದ್ದು ಸೋನಿಯಾ ಗಾಂಧಿಯವರಿಗೆ ಉಡುಗೊರೆಯನ್ನು ನೀಡಿ ಅಚ್ಚರಿಗೊಳಿಸಿದರು.
Rahul Gandhi’s sweet surprise to his Mother Sonia Gandhi ❤️ pic.twitter.com/Izg6odFQjn
— Surbhi (@SurrbhiM) October 4, 2023