News Karnataka Kannada
Monday, April 29 2024
ದೆಹಲಿ

ನವದೆಹಲಿ: ಅಹಮದಾಬಾದ್ ನಲ್ಲಿ ಇಂಡಿಗೋ ವಿಮಾನ ಲ್ಯಾಂಡಿಂಗ್‌ ವೇಳೆ ಅವಘಢ

ಇಂಡಿಗೋ ಸಂಸ್ಥೆ ಲಕ್ಷದ್ವೀಪದ ಅಗತ್ತಿ ವಿಮಾನ ನಿಲ್ದಾಣಕ್ಕೆ ಬೆಂಗಳೂರಿನಿಂದ ನೇರ ಫ್ಲೈಟ್ ಸೇವೆಯನ್ನು ಮಾರ್ಚ್ 31ರಿಂದ ಆರಂಭಿಸುತ್ತಿದೆ.
Photo Credit : Facebook

ನವದೆಹಲಿ: ಇಂಡಿಗೋ ವಿಮಾನವೊಂದು ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಇಳಿಯಲು ಪ್ರಯತ್ನಿಸುತ್ತಿದ್ದಾಗ ರೆಕ್ಕೆಗಳು ರನ್‌ವೇಗೆ ( ಟೈಲ್ ಸ್ಟ್ರೈಕ್) ತಾಗಿದ ಘಟನೆ ನಡೆದಿದೆ.

ಬೆಂಗಳೂರಿನಿಂದ ಅಹಮದಾಬಾದ್‌ಗೆ ಕಾರ್ಯಾಚರಿಸುತ್ತಿದ್ದ ಇಂಡಿಗೋ ಫ್ಲೈಟ್ 6E-6595, ಅಹಮದಾಬಾದ್‌ನಲ್ಲಿ ಇಳಿಯುವಾಗ ಟೈಲ್ ಸ್ಟ್ರೈಕ್ ಉಂಟಾಯಿತು. ಬಳಿಕ ವಿಮಾನವನ್ನು ಅಹಮದಾಬಾದ್‌ ನಿಲ್ದಾಣದಲ್ಲಿ ನಿಲುಗಡೆಗೊಳಿಸಿ ಪರಿಶೀಲನೆ ನಡೆಸಲಾಗಿದೆ. ಅಧಿಕಾರಿಗಳು ಈ ಸಂಬಂಧ ತನಿಖೆ ನಡೆಸುತ್ತಿದ್ದಾರೆ ಎಂದು ಇಂಡಿಗೋ ಹೇಳಿಕೆಯಲ್ಲಿ ತಿಳಿಸಿದೆ.

ಅದೇ ರೀತಿ ಕಳೆದ ಮಂಗಳವಾರ ಮುಂಜಾನೆ, ಇಂಡಿಗೋ ವಿಮಾನವು ಮುಂಬೈ ವಿಮಾನ ನಿಲ್ದಾಣದಲ್ಲಿ ಇಳಿಯಲು ಪ್ರಯತ್ನಿಸುತ್ತಿದ್ದ ವೇಳೆ ಪ್ರತಿಕೂಲ ಹವಾಮಾನದಿಂದ (ಬಿಪರ್‌ಜಾಯ್‌ ಚಂಡಮಾರುತದಿಂದಾಗಿ) ಲ್ಯಾಂಡಿಂಗ್‌ ಸಾಧ್ಯವಾಗಿರಲಿಲ್ಲ. ಬಳಿಕ ವಿಮಾನವನ್ನು ಉದಯಪುರದಲ್ಲಿ ಲ್ಯಾಂಡ್‌ ಆಗಲು ಸೂಚಿಸಲಾಗಿತ್ತು. ಅಲ್ಲಿ ಕೂಡ ಪ್ರತಿಕೂಲ ಸ್ಥಿತಿ ಎದುರಾಗಿದ್ದು,
ಎರಡು ಪ್ರಯತ್ನಗಳ ಬಳಿಕ ವಿಮಾನ ಲ್ಯಾಂಡ್‌ ಆಗಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು