ದೆಹಲಿ: ಕೇಂದ್ರ ಸರ್ಕಾರವು ಆನ್ಲೈನ್ ಗೇಮಿಂಗ್, ಕ್ಯಾಸಿನೋಗಳು ಮತ್ತು ಇತರ ಗೇಮ್ಸ್ ಮೇಲೆ ಶೇಕಡಾ 28ರಷ್ಟು ತೆರಿಗೆ ವಿಧಿಸಲು, ಜಿಎಸ್ಟಿ ಕಾನೂನಿನಲ್ಲಿ ತಿದ್ದುಪಡಿ ಮಾಡಲು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ತಿದ್ದುಪಡಿ ಮಸೂದೆಗಳನ್ನು ಮಂಡಿಸಿದ್ದಾರೆ.
ಕೇಂದ್ರೀಯ ಸರಕು ಮತ್ತು ಸೇವಾ ತೆರಿಗೆ (ತಿದ್ದುಪಡಿ) ಮಸೂದೆ 2023, ಸಮಗ್ರ ಸರಕು ಮತ್ತು ಸೇವಾ ತೆರಿಗೆ (ತಿದ್ದುಪಡಿ) ಮಸೂದೆ 2023ನ್ನು ಲೋಕಸಭೆ ಗದ್ದಲದ ನಡುವೆಯು ಹಣಕಾಸು ಸಚಿವೆ ಮಂಡಿಸಿದ್ದಾರೆ.
ಇಂದು (ಆ.11) ಸಂಸತ್ತಿನ ಮುಂಗಾರು ಅಧಿವೇಶನ ಕೊನೆಯಾಗಲಿದೆ, ಇದಕ್ಕೂ ಮುನ್ನ ಈ ಮಸೂದೆಯನ್ನು ಮಂಡಿಸಿದ್ದು, ಒಮ್ಮೆ ಕಾನೂನುಗಳ ತಿದ್ದುಪಡಿ ಅಂಗೀಕರಿಸಿದ ನಂತರ, ರಾಜ್ಯಗಳ ಜಿಎಸ್ಟಿ ಕಾನೂನಿನಲ್ಲೂ ಇದೇ ರೀತಿಯ ತಿದ್ದುಪಡಿಗಳನ್ನು ಮಾಡಲಾಗುವುದು ಎಂದು ಹೇಳಿದ್ದಾರೆ.