ನವದೆಹಲಿ: ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಅಗ್ನಿ-5MIRV ಕ್ಷಿಪಣಿಯನ್ನು ಅಭಿವೃದ್ಧಿಪಡಿಸಿದ್ದು ಅದು ತನ್ನ ಮೊದಲ ಹಾರಾಟ ನಡೆಸಿದೆ.
ಕೆಲವೇ ರಾಷ್ಟ್ರಗಳ ಬಳಿ ಇರುವ ಈ ತಂತ್ರಜ್ಞಾನವು ಒಂದೇ ಕ್ಷಿಪಣಿಯನ್ನು ಬಳಸಿ ಹಲವು ಗುರಿಗಳನ್ನು ಕೆಡವುವ ಸಾಮರ್ಥ್ಯ ಹೊಂದಿದೆ.
DRDO ವಿಜ್ಞಾನಿಗಳನ್ನು ಅಭಿನಂದಿಸಿದ ಪ್ರಧಾನಿ ಮೋದಿ, ಮಿಷನ್ ದಿವ್ಯಾಸ್ತ್ರವನ್ನು ಕೈಗೊಂಡ ವಿಜ್ಞಾನಿಗಳ ಬಗ್ಗೆ ಹೆಮ್ಮೆಯಿದೆ ಎಂದು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.