News Karnataka Kannada
Thursday, May 02 2024
ದೆಹಲಿ

ಮುಂಬೈಗೆ ಬರುತ್ತಿದ್ದ ಇಸ್ರೇಲ್‌ ಮಾಲೀಕತ್ವದ ಹಡಗನ್ನು ವಶಪಡಿಸಿಕೊಂಡ ಇರಾನ್‌

ಮುಂಬೈಗೆ ಬರುತ್ತಿದ್ದ ಇಸ್ರೇಲ್‌ ಮಾಲೀಕತ್ವದ ಸರಕು ಸಾಗಾಣೆ ಹಡಗನ್ನು ಇರಾನ್‌ ವಶಪಡಿಸಿಕೊಂಡಿರುವ ಘಟನೆ ನಡೆದಿದೆ.
Photo Credit : NewsKarnataka

ನವದೆಹಲಿ: ಮುಂಬೈಗೆ ಬರುತ್ತಿದ್ದ ಇಸ್ರೇಲ್‌ ಮಾಲೀಕತ್ವದ ಸರಕು ಸಾಗಾಣೆ ಹಡಗನ್ನು ಇರಾನ್‌ ವಶಪಡಿಸಿಕೊಂಡಿರುವ ಘಟನೆ ನಡೆದಿದೆ.

ಯುಎಇಯಿಂದ ಸರಕು ತುಂಬಿಸಿಕೊಂಡು ಮುಂಬೈ ಬಂದರಿಗೆ  ಕಂಟೈನರ್‌ ಶಿಪ್‌ ಬರುತ್ತಿತ್ತು. ಈ ಹಡಗಿನಲ್ಲಿ 17 ಮಂದಿ ಭಾರತೀಯರಿದ್ದು ಇವರ ಬಿಡುಗಡೆ ಸಂಬಂಧ ಭಾರತ ಇರಾನ್‌ ಜೊತೆ ಮಾತುಕತೆ ನಡೆಸುತ್ತಿದೆ ಎಂದು ಸರ್ಕಾರಿ ಮೂಲಗಳನ್ನು ಆಧಾರಿಸಿ ಮಾಧ್ಯಮವೊಂದು ವರದಿ ಮಾಡಿದೆ.

ಇಸ್ರೇಲ್‌ ಮೇಲೆ 48 ಗಂಟೆಯ ಒಳಗಡೆ ಇರಾನ್‌ ದಾಳಿ ನಡೆಸಬಹುದು ಎಂಬ ವರದಿಯ ಬೆನ್ನಲ್ಲೇ ಈ ಘಟನೆ ನಡೆದಿದೆ. ಪೋರ್ಚುಗೀಸ್‌ ಧ್ವಜ ಹೊಂದಿದ್ದ ಈ ಹಡಗಿನ ಮೇಲೆ ಇರಾನ್‌ ಸೈನಿಕರು ಹೆಲಿಕಾಪ್ಟರ್‌ನಿಂದ ನೇರವಾಗಿ ಇಳಿದು ದಾಳಿ ಮಾಡಿ ವಶ ಪಡಿಸಿದ್ದಾರೆ.

ಸೋವಿಯತ್ ಕಾಲ ಮಿಲ್ ಎಂಐ -17 ಹೆಲಿಕಾಪ್ಟರ್ ಬಳಸಿ ಈ ದಾಳಿ ಮಾಡಿದ್ದು, ಇದನ್ನು ಇರಾನಿನ ರೆವಲ್ಯೂಷನ್‌ ಗಾರ್ಡ್‌ ಮತ್ತು ಇರಾನ್ ಬೆಂಬಲಿತ ಯೆಮೆನ್ ಹೌತಿ ಬಂಡುಕೋರರು ಈ ಹಿಂದೆ ಬಳಸಿದ್ದರು.

ಏಪ್ರಿಲ್‌ 1 ರಂದು ಸಿರಿಯಾದಲ್ಲಿರುವ ಇರಾನ್‌ ರಾಯಭಾರ ಕಚೇರಿಯ ಮೇಲೆ ಬಾಂಬ್‌ ದಾಳಿ ನಡೆದಿತ್ತು. ಈ ದಾಳಿಯಲ್ಲಿ ಕಮಾಂಡರ್‌ ಸೇರಿದಂತೆ 7 ಮಂದಿ ಇರಾನ್‌ ಮಿಲಿಟರಿ ಸಲಹೆಗಾರರು ಮೃತಪಟ್ಟಿದ್ದರು.

ಈ ಏರ್‌ ಸ್ಟ್ರೈಕ್‌ ಅನ್ನು ಇಸ್ರೇಲ್‌ ಮಾಡಿದೆ ಎಂದು ಇರಾನ್‌ ದೂರಿದರೆ ಇಸ್ರೇಲ್‌ ಇಲ್ಲಿಯವರೆಗೆ ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿಲ್ಲ. ಈ ದಾಳಿಗೆ ಪ್ರತೀಕಾರವಾಗಿ ನಾವು ಇಸ್ರೇಲ್‌ ಮೇಲೆ ದಾಳಿ ಮಾಡುತ್ತೇವೆ ಎಂದು ಇರಾನ್‌ ಎಚ್ಚರಿಕೆ ನೀಡಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು