News Karnataka Kannada
Sunday, May 05 2024
ದೆಹಲಿ

ಜುಲೈ 1ಕ್ಕೆ ಭಾರತದ ಅಂದಾಜು ಜನಸಂಖ್ಯೆ 139ಕೋಟಿಗೆ ಏರಿಕೆ: ಸಚಿವ ನಿತ್ಯಾನಂದ ರೈ

population as on july
Photo Credit : By Author

ನವದೆಹಲಿ: “ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮಾಹಿತಿ ಪ್ರಕಾರ ಜುಲೈ , 2023ಕ್ಕೆ ಭಾರತದ ಜನಸಂಖ್ಯೆ 139 ಕೋಟಿ ಎಂದು ಕೇಂದ್ರ ಗೃಹ ಖಾತೆ ಸಚಿವ ನಿತ್ಯಾನಂದ ರೈ ಲೋಕಸಭೆಗೆ ಇಂದು(ಜುಲೈ.25) ತಿಳಿಸಿದ್ದಾರೆ.

ಭಾರತದ ಜನಸಂಖ್ಯೆ ಬಗ್ಗೆ ಕೇಳಲಾದ ಪ್ರಶ್ನೆಗೆ ಲಿಖಿತ ರೂಪದಲ್ಲಿ ಮಾಹಿತಿ ನೀಡಿದ ಸಚಿವರು, ‘ರಾಷ್ಟ್ರೀಯ ಜನಸಂಖ್ಯೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಪ್ರಕಟಿಸಿದ ಮಾಹಿತಿ ಪ್ರಕಾರ 2023 ಜುಲೈ 1ಕ್ಕೆ ಭಾರತದ ಜನಸಂಕ್ಯೆ 139,23,29,000 ಇದೆ’ ಎಂದರು.

ವಿಶ್ವಸಂಸ್ಥೆ ಆರ್ಥಿಕ ಮತ್ತು ಸಾಮಾಜಿಕ ವ್ಯವಹಾರಗಳ ಇಲಾಖೆ, ಪಾಪುಲೇಶನ್ ಡಿವಿಷನ್ ಆನ್ ಲೈನ್ ಪಬ್ಲಿಕೇಶನ್, ವಲ್ರ್ಡ್ ಪಾಪ್ಯುಲೇಶನ್ ಪ್ರಾಸ್ಪೆಕ್ಟಸ್-2022 ಅನ್ನು ಈ ವೇಳೆ ಗಣನೆಗೆ ತೆಗೆದುಕೊಳ್ಳಲಾಗಿದೆ’ ಎಂದು ತಿಳಿಸಿದ್ದಾರೆ. ಇನ್ನು 2021ರಂದು ಜನಗಣತಿ ನಡೆಸುವ ಬಗ್ಗೆ ಮಾರ್ಚ್ 28, 2019ರಂದು ಗೆಜೆಟ್ ನಲ್ಲಿ ತಿಳಿಸಲಾಗಿತ್ತು. ಕೋವಿಡ್ ಕಾರಣದಿಂದ 2021ರ ಜನಗಣತಿಯನ್ನು ಮುಂದೂಡಲಾಗಿದೆ ಎಂದು ತಿಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು