News Karnataka Kannada
Monday, May 06 2024
ದೆಹಲಿ

ಭಾರತದಿಂದ ಅಕ್ಕಿ ರಫ್ತು ನಿಷೇಧ: ಹಲವು ದೇಶಗಳಲ್ಲಿ ಆತಂಕ

basmati rice
Photo Credit : News Kannada

ನವದೆಹಲಿ: ಬಾಸ್ಮತಿಯೇತರ ಅಕ್ಕಿಯ ರಫ್ತನ್ನು ಭಾರತ ನಿಷೇಧ ಹೇರಿದ ಕ್ರಮದಿಂದ ಜಾಗತಿಕವಾಗಿ ಆಹಾರ ಬೆಲೆ ಏರಿಕೆಯಾಗುವ ನಿರೀಕ್ಷೆ ಇದೆ. ರಷ್ಯಾ ಉಕ್ರೇನ್ ಯುದ್ಧದಿಂದಾಗಿ ಉಕ್ರೇನ್ ದೇಶದಿಂದ ಆಹಾರಪದಾರ್ಥಗಳ ಸರಬರಾಜಿನಲ್ಲಿ ಆಗಿರುವ ವ್ಯತ್ಯಯದಿಂದ ಹಲವು ದೇಶಗಳು ಪರಿತಪಿಸುತ್ತಿವೆ. ಈಗ ಭಾರತದ ಅಕ್ಕಿ ರಫ್ತು ನಿಷೇಧದಿಂದ ಜಾಗತಿಕವಾಗಿ ಹಣದುಬ್ಬರ ಏರಿಕೆಗೆ ಸಾಧ್ಯತೆ ಇದೆ. ಜಾಗತಿಕವಾಗಿ ಒಟ್ಟು ಅಕ್ಕಿ ರಫ್ತಿನಲ್ಲಿ ಭಾರತದ ಪಾಲು ಶೇ. 40ರಷ್ಟಿದೆ.

ಉತ್ತರ ಅಮೆರಿಕ ಖಂಡದ ರಾಷ್ಟ್ರಗಳಾದ ಕೆನಡಾ ಮತ್ತು ಅಮೆರಿಕಾದಲ್ಲಿ ಅಕ್ಕಿಗೆ ಬಹಳ ಬೇಡಿಕೆ ಇದೆ. ಇದಕ್ಕೆ ಕಾರಣ ಈ ದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಭಾರತೀಯ ಸಮುದಾಯದವರು. 2022-23ರ ವರ್ಷದಲ್ಲಿ ಉತ್ತರ ಅಮೆರಿಕನ್ ದೇಶಗಳು ಭಾರತದಿಂದ 64,330 ಟನ್​ಗಳಷ್ಟು ಬಾಸ್ಮತಿಯೇತರ ಅಕ್ಕಿ ಆಮದು ಮಾಡಿಕೊಂಡಿದ್ದವು. ಈಗ ಭಾರತ ಅಕ್ಕಿ ರಫ್ತು ನಿಷೇಧ ಮಾಡುತ್ತಿದ್ದಂತೆಯೇ ಅಮೆರಿಕ ಮತ್ತು ಕೆನಡಾದಲ್ಲಿ ಭಾರತೀಯ ಸಮುದಾಯದವರು ಅಕ್ಕಿ ಖರೀದಿಗೆ ಮುಗಿಬೀಳುತ್ತಿದ್ದಾರೆ ಎಂದು ವರದಿಯಾಗಿದೆ.

ಭಾರತದ ಅಕ್ಕಿಯ ಮೇಲೆ ಅತಿಹೆಚ್ಚು ಅವಲಂಬಿತವಾಗಿರುವುದು ನೆರೆಯ ದೇಶಗಳಾದ ಬಾಂಗ್ಲಾದೇಶ ಮತ್ತು ನೇಪಾಳ, ಕ್ಯಾಮರೂನ್, ಡಿಜಿಬೋಟಿ, ಬೆನಿನ್, ಆಂಗೊಲಾ, ಗಿನಿಯಾ, ಐವರಿ ಕೋಸ್ಟ್, ಕೀನ್ಯಾ ಮೊದಲಾದ ದೇಶಗಳೂ ಕೂಡ ಭಾರತದಿಂದ ಬಾಸ್ಮತಿಯೇತರ ಅಕ್ಕಿಯನ್ನು ಹೆಚ್ಚು ಖರೀದಿಸುತ್ತವೆ. ಆದರೆ ಈಗ ಭಾರತದಿಂದ ಅಕ್ಕಿ ರಫ್ತು ನಿಷೇಧವಾಗಿರುವುದರಿಂದ ಈ ದೇಶಗಳಲ್ಲಿ ಆತಂಕ ಮನೆ ಮಾಡಿದೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು