ಹೈದರಾಬಾದ್: ತಾಯಿಯೇ ಮಗಳನ್ನು ಕೊಂದ ಘಟನೆಯೊಂದು ಹೈದರಾಬಾದ್ ನಲ್ಲಿ ನಡೆದಿದೆ. ತಾನು ನೋಡಿದ ಹುಡುಗನನ್ನು ಮದುವೆಯಾಗಲು ಮಗಳು ಒಪ್ಪದಕ್ಕೆ ಹತ್ಯೆ ಮಾಡಿದ್ದಾಳೆ. ಹೈದರಾಬಾದ್ನ ಹೊರವಲಯದಲ್ಲಿರುವ ಇಬ್ರಾಹಿಂಪಟ್ಟಣಂನಲ್ಲಿ ಈ ಘಟನೆ ನಡೆದಿದೆ.
ಮೋಟೆ ಜಂಗಮ್ಮ ಕೊಲೆ ಮಾಡಿದ ಮಹಿಳೆ, ಮೋಟೆ ಭಾರ್ಗವಿ (20) ಮೃತ ದುರ್ದೈವಿ. ಮಗಳನ್ನು ಕೊಂದು ನಂತರ ಅದನ್ನು ಆತ್ಮಹತ್ಯೆ ಎಂದು ಬಿಂಬಿಸಲು ಆರೋಪಿ ತಾಯಿ ಪ್ರಯತ್ನಿಸಿದ್ದಾಳೆ. ಆದರೆ ಮಗಳ ಕತ್ತಿನ ಮೇಲಿದ್ದ ಗುರುತು ಸತ್ಯ ಬಹಿರಂಗ ಪಡಿಸಿದೆ.
ಮೃತ ಯುವತಿ ತನ್ನ ತಾಯಿ, ತಂದೆ ಮಲ್ಲಯ್ಯ ಮತ್ತು ಸಹೋದರ ಚರಣ್ ಜೊತೆ ವಾಸಿಸುತ್ತಿದ್ದಳು. ಪ್ರಕರಣದ ತನಿಖೆ ನಡೆಯುತ್ತಿದೆ.