ನವದೆಹಲಿ: ಸಂಘರ್ಷ ಪೀಡಿತ ಪ್ಯಾಲಿಸ್ತೇನ್ ಜನರಿಗಾಗಿ ವೈದ್ಯಕೀಯ ಸಾಮಗ್ರಿಗಳನ್ನು ಹೊತ್ತ ವಿಮಾನ ಉತ್ತರ ಪ್ರದೇಶದ ಗಾಜಿಯಾಬಾದ್ ಹಿಂಡನ್ ವಾಯುನೆಲೆಯಿಂದ ಹೊರಟಿದೆ. ಪ್ಯಾಲಿಸ್ತೇನ್ ಜನರಿಗಾಗಿ ಸುಮಾರು 6.5 ಟನ್ ವೈದ್ಯಕೀಯ ಸುಮಾರು 6.5 ಟನ್ ವೈದ್ಯಕೀಯ ನೆರವು ಮತ್ತು 32 ಟನ್ ವಿಪತ್ತು ಪರಿಹಾರ ಸಾಮಗ್ರಿಗಳನ್ನು ಹೊತ್ತ ಭಾರತೀಯ ವಾಯುಪಡೆ ವಿಮಾನ ಈಜಿಫ್ಟ್ ಎಲ್ ಅರಿಶ್ ವಿಮಾನ ನಿಲ್ದಾಣಕ್ಕೆ ಹೊರಟಿದೆ.
ಔಷಧಗಳು, ಶಸ್ತ್ರ ಚಿಕಿತ್ಸಾ ವಸ್ತುಗಳು, ಟೆಂಟ್ಗಳು, ಹೊದಿಕೆ, ನೈರ್ಮಲ್ಯ ಉಪಕರಣಗಳು, ನೀರು ಶುದ್ಧೀಕರಣ ಮಾತ್ರೆಗಳು, ಮೊದಲಾದ ಅಗತ್ಯ ವಸ್ತುಗಳನ್ನು ರವಾನಿಸಲಾಗಿದೆ.
ಪ್ಯಾಲಿಸ್ತೇನ್ ಪ್ರಾಧಿಕಾರ ಅಧ್ಯಕ್ಷ ಮಹಮ್ಮದ್ ಅಬ್ಬಾಸ್ ಅವರೊಂದಿಗೆ ಇತ್ತೀಚೆಗೆ ದೂರವಾಣಿಯಲ್ಲಿ ಮಾತನಾಡಿದ್ದ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಪ್ಯಾಲಿಸ್ತೇನ್ ಜನರಿಗೆ ಮಾನವೀಯ ನೆರವು ಒದಗಿಸುವುದನ್ನು ಭಾರತ ಮುಂದುವರಿಸಲಿದೆ ಎಂದು ಹೇಳಿದ್ದರು.