ನವದೆಹಲಿ: ಸ್ಯಾಮ್ಸಂಗ್ ಬಳಕೆದಾರರಿಗೆ ಕೇಂದ್ರ ಸರ್ಕಾರ ರಿಸ್ಕ್ ವಾರ್ನಿಂಗ್ ನೀಡಿದ ಬೆನ್ನಲ್ಲೇ ಇದೀಗ ಐಫೋನ್ ಬಳಕೆದಾರರಿಗೂ ಹೈರಿಸ್ಕ್ ವಾರ್ನಿಂಗ್ ನೀಡಿದೆ.
ಕೆಲ ಲೋಪದೋಷಗಳನ್ನು ಬಳಸಿಕೊಂಡು ಹ್ಯಾಕರ್ಸ್, ಅತೀ ಸುರಕ್ಷಿತ ಎಂದೇ ಗುರುತಿಸಿಕೊಂಡಿರುವ ಐಫೋನ್ ಅತೀ ಸಾಕ್ಷ್ಮ ಮಾಹಿತಿಯನ್ನು ಕದಿಯುವ ಸಾಧ್ಯತೆ ಇದೆ. ಹೀಗಾಗಿ ಕೇಂದ್ರ ಭದ್ರತಾ ಸಲಹೆ ಕೇಂದ್ರವಾಗಿರುವ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ ಇ ವಾರ್ನಿಂಗ್ ನೀಡುವ ಮೂಲಕ ಬಳಕೆದಾರರ ಸುರಕ್ಷತೆಗೆ ಮುನ್ನಚ್ಚೆರಿಕೆ ವಹಿಸುವಂತೆ ಹೇಳಿದೆ.
ಹ್ಯಾಕರ್ಸ್ ಐಫೋನ್ ನ್ನು ಟಾರ್ಗೆಟ್ ಮಾಡಿ ಸುಲಭವಾಗಿ ಸಾಕ್ಷ್ಮ ಮಾಹಿತಿಯನ್ನು ಪಡೆಯುತ್ತಾರೆ. ಪ್ರಮುಖವಾಗಿ ಆರ್ಬಿಟರಿ ಕೋಡ್, ಬೈಪಾಸ್ ಸೆಕ್ಯೂರಿಟಿ ರಿಸ್ಟ್ರಿಕ್ಷನ್, ಕಾಸ್ ಡಿನೈಲ್ ಸರ್ವೀಸ್(DoS) ಕಂಡೀಷನ್, ಬೈಪಾಸ್ ಅಥೆಂಟಿಕೇಶನ್, ದೈನ್ ಎಲಿವೇಟೆಡ್ ಪ್ರಿವಿಲೇಜ್ ಸೇರಿದಂತೆ ಪ್ರಮುಖ ಭದ್ರತಾ ನಿಯಂತ್ರಕಗಳ ಮೇಲೆ ದಾಳಿ ಮಾಡಿ ಅತೀ ಸೂಕ್ಷ್ಮ ಮಾಹಿತಿ ಹ್ಯಾಕ್ ಮಾಡುವ ಸಾಧ್ಯತೆಯನ್ನು CERT-In ಎಚ್ಚರಿಕೆ ನೀಡಿದೆ.