ದೆಹಲಿ: ಪ್ರಧಾನಿ ಮೋದಿಗೆ ಅವರಿಗೆ ಸಂಬಂಧಿಸಿದ ಅಪರೂಪದ ವಿಡಿಯೋ ಒಂದನ್ನು ಬಿಜೆಪಿ ಶೇರ್ ಮಾಡಿದೆ. ಆ ವಿಡಿಯೋದಲ್ಲಿ ಮೋದಿ, ಇಬ್ಬರು ಮಕ್ಕಳ ಜೊತೆ ಮಗುವಾಗಿದ್ದಾರೆ. ದೆಹಲಿಯಲ್ಲಿರುವ ಪ್ರಧಾನಿ ಕಚೇರಿಗೆ ಮೋದಿಯನ್ನು ಭೇಟಿಯಾಗಲು ಗಣ್ಯರು ಬಂದಿದ್ದ ಸಂದರ್ಭದಲ್ಲಿ ಈ ದೃಶ್ಯ ಸೆರೆಯಾಗಿದೆ.
ದೃಶ್ಯದಲ್ಲಿ ಗಣ್ಯರ ಜೊತೆ ಬಂದಿದ್ದ ಇಬ್ಬರು ಮಕ್ಕಳನ್ನು ತಮ್ಮ ಪಕ್ಕಕ್ಕೆ ಕರೆಯುವ ಪ್ರಧಾನಿ, ಮಕ್ಕಳ ಕಿವಿಯನ್ನು ಹಿಡಿದು ಇಬ್ಬರ ತಲೆಗೆ ಡಿಚ್ಚಿ ಕೊಡಿಸುತ್ತಾರೆ. ನಂತರ ಬಾಲಕಿಯ ತಲೆಗೆ ತಮಾಷೆಯಿಂದ ಹೊಡೆಯುತ್ತಾರೆ.
ಕೊನೆಗೆ ಬಾಲಕಿಯ ಮುಂದೆ ನಿಂತು, ತಮ್ಮ ಹಣೆಗೆ ನಾಣ್ಯವನ್ನು ಅಂಟಿಸಿಕೊಂಡು ತಲೆಯ ಹಿಂಬದಿಂದ ಹೊಡೆದು ಅದನ್ನು ಬೀಳಿಸುತ್ತಾರೆ. ನಂತರ ನಾನು ಮಾಡಿದ ಮ್ಯಾಜಿಕ್ ಅನ್ನು ನೀವು ಮಾಡುವಂತೆ ಮಕ್ಕಳಿಗೆ ಮೋದಿ ಹೇಳಿತ್ತಾರೆ. ಮೋದಿ ಅವರೇ ಇಬ್ಬರು ಮಕ್ಕಳ ಹಣೆಗೆ ನಾಣ್ಯವನ್ನು ಅಂಟಿಸಿದಂತೆ ಮಾಡುತ್ತಾರೆ. ಆದರೆ ನಾಣ್ಯವನ್ನು ಅಂಟಿಸಿರುವುದಿಲ್ಲ. ಹೀಗಿದ್ದೂ ನಾಣ್ಯವನ್ನು ಬೀಳಿಸುವಂತೆ ಮೋದಿ ಹೇಳುತ್ತಾರೆ. ಅವರ ತಲೆಗೆ ನಿಧಾನವಾಗಿ ತಟ್ಟುವ ವಿಡಿಯೋ ಅದಾಗಿದೆ. ಈ ವಿಡಿಯೋವನ್ನು ಶೇರ್ ಮಾಡಿರುವ ಬಿಜೆಪಿ, “ಮಕ್ಕಳ ಜೊತೆ ಮೋದಿ ಮಗುವಾಗಿದ್ದಾರೆ” ಎಂದು ಕ್ಯಾಪ್ಷನ್ ನೀಡಿದೆ.
बच्चों के साथ बच्चे बन जाते हैं मोदी जी… pic.twitter.com/UUOXT5oouX
— BJP (@BJP4India) November 16, 2023