News Karnataka Kannada
Friday, May 03 2024
ದೆಹಲಿ

ಭಾರತದ ಅತಿದೊಡ್ಡ ಹಾವು ‘ವಾಸುಕಿ’ಯ ಪಳೆಯುಳಿಕೆ ಪತ್ತೆ

ಜಗತ್ತಿನ ಅತೀ ದೊಡ್ಡ, ಭಾರೀ ಗಾತ್ರದ ಹಾವು  ಭಾರತದಲ್ಲಿ ಬದುಕಿತ್ತು ಎಂಬುದು ಸಂಶೋಧನೆಯಿಂದ ಗೊತ್ತಾಗಿದೆ. ನಿನ್ನೆ ವಿಜ್ಞಾನ ಪತ್ರಿಕೆಗಳಲ್ಲಿ ಇದು ವರದಿಯಾಗಿದೆ.
Photo Credit : NewsKarnataka

ಹೊಸದಿಲ್ಲಿ: ಜಗತ್ತಿನ ಅತೀ ದೊಡ್ಡ, ಭಾರೀ ಗಾತ್ರದ ಹಾವು  ಭಾರತದಲ್ಲಿ ಬದುಕಿತ್ತು ಎಂಬುದು ಸಂಶೋಧನೆಯಿಂದ ಗೊತ್ತಾಗಿದೆ. ನಿನ್ನೆ ವಿಜ್ಞಾನ ಪತ್ರಿಕೆಗಳಲ್ಲಿ ಇದು ವರದಿಯಾಗಿದೆ.

ಗುಜರಾತ್‌ನಲ್ಲಿ ಪತ್ತೆಯಾದ ಪ್ರಾಚೀನ ಹಾವೊಂದರ ಪಳೆಯುಳಿಕೆಗಳು  ಅದರ ಭಾರೀ ಗಾತ್ರ ಹಾಗೂ ತೂಕವನ್ನು ತಿಳಿಯಪಡಿಸಿವೆ. ಅದು ಸುಮಾರು 50 ಅಡಿ ಉದ್ದ ಹಾಗೂ 1,000 ಕೆಜಿ ತೂಕವಿತ್ತಂತೆ!

2005ರಲ್ಲಿ ಗುಜರಾತ್‌ನಲ್ಲಿ ಪತ್ತೆಯಾದ ಪಳೆಯುಳಿಕೆಗಳು, ಭೂಮಿಯ ಮೇಲೆ ಅಸ್ತಿತ್ವದಲ್ಲಿದ್ದ ಅತಿದೊಡ್ಡ ಹಾವಿನದ್ದು ಆಗಿವೆ. ಇದನ್ನು ಸಂಶೋಧಕರು “ವಾಸುಕಿ ಇಂಡಿಕಸ್” ಎಂದು ಹೆಸರಿಸಿದ್ದಾರೆ.

ವಾಸುಕಿ ಇಂಡಿಕಸ್‌ನ ಪಳೆಯುಳಿಕೆಯನ್ನು IIT-ರೂರ್ಕಿಯ ಪ್ರಾಗ್ಜೀವಶಾಸ್ತ್ರದ ಪ್ರಾಧ್ಯಾಪಕ ಸುನಿಲ್ ಬಾಜಪೇಯಿ ಅವರು 2005ರಲ್ಲಿ ಕಂಡುಹಿಡಿದರು. ಅವರು ಕಚ್‌ನಲ್ಲಿರುವ ಕಲ್ಲಿದ್ದಲು ಗಣಿಯಲ್ಲಿ ಅವಶೇಷಗಳನ್ನು ಪತ್ತೆಹಚ್ಚಿದರು.

ಹಿಂದೂ ಪುರಾಣಗಳಲ್ಲಿ ʼವಾಸುಕಿʼ ಎಂಬ ಭಾರೀ ನಾಗರಾಜನ ಕತೆಗಳು ಇವೆ. ಇದನ್ನು ಸಾಮಾನ್ಯವಾಗಿ ಶಿವನ ಕುತ್ತಿಗೆಗೆ ಸುತ್ತುವಂತೆ ಚಿತ್ರಿಸಲಾಗುತ್ತದೆ. ಸಮುದ್ರ ಮಥನಕ್ಕೆ ಈ ಹಾವನ್ನು ಬಳಸಿಕೊಳ್ಳಲಾಗಿತ್ತು ಎಂದು ಕತೆಯಿದೆ. ಈ ಹಿನ್ನೆಲೆಯಲ್ಲಿ ಸಂಶೋಧಕರು ಇದಕ್ಕೆ ʼವಾಸುಕಿ ಇಂಡಿಕಸ್ʼ ಎಂಬ ಹೆಸರನ್ನು ನೀಡಿದ್ದಾರೆ.

ಸುಮಾರು 4.7 ಕೋಟಿ ವರ್ಷಗಳ ಹಿಂದೆ ಭಾರತದಲ್ಲಿ ಸಂಚರಿಸಿದ್ದ ಅತಿದೊಡ್ಡ ಹಾವಿನ ಪಳೆಯುಳಿಕೆಗಳನ್ನ ಸಂಶೋಧಕರು ಕಂಡು ಹಿಡಿದಿದ್ದಾರೆ. ಇಂಥದ್ದೊಂದು ದೈತ್ಯ ಹಾವಿನ ಕುರುಹು ಕಂಡು ಇಡೀ ಜಗತ್ತು ಭಾರತದತ್ತ ತಿರುಗಿ ನೋಡ್ತಿದೆ.

“ಅದರ ದೊಡ್ಡ ಗಾತ್ರವನ್ನು ಪರಿಗಣಿಸಿದರೆ, ವಾಸುಕಿಯು ನಿಧಾನವಾಗಿ ಚಲಿಸುವ ಹೊಂಚುದಾಳಿ ಪರಭಕ್ಷಕವಾಗಿತ್ತು. ಅದು ಅನಕೊಂಡಗಳು ಮತ್ತು ಹೆಬ್ಬಾವುಗಳಂತೆ ಸುತ್ತುವರಿದು ಬಿಗಿಯುವಿಕೆಯ ಮೂಲಕ ತನ್ನ ಬೇಟೆಯನ್ನು ಪಡೆಯುತ್ತಿತ್ತು” ಎಂದು ಐಐಟಿ-ರೂರ್ಕಿಯಲ್ಲಿ ಪ್ಯಾಲಿಯಂಟಾಲಜಿಯ ಪೋಸ್ಟ್‌ ಡಾಕ್ಟರಲ್ ಸಂಶೋಧಕ ಮತ್ತು ಅಧ್ಯಯನದ ಪ್ರಮುಖ ಲೇಖಕ ದೇಬಜಿತ್ ದತ್ತಾ ಹೇಳುತ್ತಾರೆ. “ಈ ಹಾವು ಕರಾವಳಿಯ ಸಮೀಪವಿರುವ ಜೌಗು ಪ್ರದೇಶದಲ್ಲಿ ಜಾಗತಿಕ ತಾಪಮಾನವು ಇಂದಿನಕ್ಕಿಂತ ಹೆಚ್ಚಿರುವ ಸಮಯದಲ್ಲಿ ವಾಸಿಸುತ್ತಿತ್ತು” ಎಂದಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು