News Karnataka Kannada
Friday, May 03 2024
ಮೈಸೂರು

ರಾಜ್ಯದಲ್ಲಾದ ಅಭಿವೃದ್ಧಿಯನ್ನು ರಾಹುಲ್ ಗಾಂಧಿ ಹೇಳಲಿ

ಚುನಾವಣಾ ಪ್ರಚಾರಕ್ಕಾಗಿ ರಾಜ್ಯಕ್ಕೆ ಭೇಟಿ ನೀಡಲಿ ರುವ ರಾಹುಲ್ ಗಾಂಧಿ ಅವರು, ಗ್ಯಾರಂಟಿ ಹೊರತಾಗಿ ರಾಜ್ಯದಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನರಿಗೆ ತಿಳಿಸಬೇಕು’ ಎಂದು ಬಿಜೆಪಿ ಮುಖಂಡರಾದ ಮೈಕ ಪ್ರೇಮ್ ಕುಮಾರ್ ಆಗ್ರಹಿಸಿದರು.
Photo Credit : By Author

ಮೈಸೂರು: ಚುನಾವಣಾ ಪ್ರಚಾರಕ್ಕಾಗಿ ರಾಜ್ಯಕ್ಕೆ ಭೇಟಿ ನೀಡಲಿ ರುವ ರಾಹುಲ್ ಗಾಂಧಿ ಅವರು, ಗ್ಯಾರಂಟಿ ಹೊರತಾಗಿ ರಾಜ್ಯದಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನರಿಗೆ ತಿಳಿಸಬೇಕು’ ಎಂದು ಬಿಜೆಪಿ ಮುಖಂಡರಾದ ಮೈಕ ಪ್ರೇಮ್ ಕುಮಾರ್ ಆಗ್ರಹಿಸಿದರು.

ನಗರದ ದೇವರಾಜ ಮಾರ್ಕೆಟ್ ಹಾಗೂ ಮನ್ನಾರ್ಸ್ ಮಾರ್ಕೆಟ್ ಮತ್ತು ಕೆ ಟಿ ಸ್ಟ್ರೀಟ್ ಅಂಗಡಿ ಮುಂಗಟ್ಟುಗಳಿಗೆ ತೆರಳಿ ಮೈಸೂರು ಕೊಡಗು ಬಿಜೆಪಿಯ ಲೋಕಸಭಾ ಅಭ್ಯರ್ಥಿ ಯದುವೀರ್ ಒಡೆಯರ್ ಪರ ಕೇಂದ್ರ ಸರ್ಕಾರದ ಸಾಧನೆಯ ಕರಪತ್ರ ಹಂಚಿ ಬಿರುಸಿನ ಮತಯಾಚನೆ ಮಾಡಿದರು.

ಈ ವೇಳೆ ಮಾತನಾಡಿದ ಅವರು ‘ರಾಜ್ಯದಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು 11 ತಿಂಗಳುಗಳು ಕಳೆದರೂ ಯಾವುದೇ ಅಭಿವೃದ್ಧಿ ಕೆಲಸ ನಡೆದಿಲ್ಲ. ಇದರ ಕಾರಣವನ್ನು ರಾಹುಲ್ ಗಾಂಧಿ ಜನರ ಮುಂದಿಡಲಿ. ಶಾಸಕರ ನಿಧಿಯ ಹಣ ಬಿಡುಗಡೆಯಾಗಿಲ್ಲ. ಹಣಕಾಸು ಹೊಂದಾಣಿಕೆಗೆ ಪರದಾಡುತ್ತಿರುವ ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿ ಹಂತ ತಲುಪಿದೆಯೇ ? ಎಂದು ಪ್ರಶ್ನಿಸಿದರು.

ಶ್ರೀರಾಮ ಕಾಲ್ಪನಿಕ ವ್ಯಕ್ತಿ ಎಂದಿದ್ದ ಕಾಂಗ್ರೆಸ್‌ ಈಗ ಚುನಾವಣೆಯ ವೇಳೆ ರಾಮನಾಮ ಜಪಿಸುತ್ತಿದೆ ಎಂದು ಟೀಕಿಸಿದ ಅವರು, ನಕ್ಸಲ್‌ ಚಟುವಟಿಕೆ ನಿಯಂತ್ರಣದಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದರು.

23ನೇ ವಾರ್ಡಿನ ಹಿರಿಯ ಬಿಜೆಪಿ ಮುಖಂಡರಾದ ಮೈ. ಕಾ. ಪ್ರೇಮ್ ಕುಮಾರ್, ಆರ್ ಪರಮೇಶ , ಸುರೇಂದ್ರ ಕಿರಣ್, ಪ್ರಮೋದ್, ಶ್ರೀಮತಿ ಲಕ್ಷ್ಮಿ, ಸುನಿಲ್ ಪೈ, ಆನಂತರಾಯ ಪೈ, ಕೃಷ್ಣ, ಕುಮಾರ್, ಸಂತೋಷ್, ಇಂದ್ರಕುಮಾರ್ ಮುಂತಾದವರು ಹಾಜರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು