News Karnataka Kannada
Sunday, April 28 2024
ದೆಹಲಿ

ಮಾರ್ಚ್ 31ರಿಂದ ಬೆಂಗಳೂರಿನಿಂದ ಲಕ್ಷದ್ವೀಪಕ್ಕೆ ನೇರ ಫ್ಲೈಟ್

ಇಂಡಿಗೋ ಸಂಸ್ಥೆ ಲಕ್ಷದ್ವೀಪದ ಅಗತ್ತಿ ವಿಮಾನ ನಿಲ್ದಾಣಕ್ಕೆ ಬೆಂಗಳೂರಿನಿಂದ ನೇರ ಫ್ಲೈಟ್ ಸೇವೆಯನ್ನು ಮಾರ್ಚ್ 31ರಿಂದ ಆರಂಭಿಸುತ್ತಿದೆ.
Photo Credit : NewsKarnataka

ನವದೆಹಲಿ: ಇಂಡಿಗೋ ಸಂಸ್ಥೆ ಲಕ್ಷದ್ವೀಪದ ಅಗತ್ತಿ ವಿಮಾನ ನಿಲ್ದಾಣಕ್ಕೆ ಬೆಂಗಳೂರಿನಿಂದ ನೇರ ಫ್ಲೈಟ್ ಸೇವೆಯನ್ನು ಮಾರ್ಚ್ 31ರಿಂದ ಆರಂಭಿಸುತ್ತಿದೆ.

ಈ ವಿಮಾನದಲ್ಲಿ 78 ಸೀಟುಗಳು ಇರುತ್ತವೆ. ಬೆಂಗಳೂರಿನಿಂದ ಈ ಫ್ಲೈಟ್​ನಲ್ಲಿ ಹೊರಟರೆ ಕೊಚ್ಚಿಯಲ್ಲಿ ಇಳಿದು ವಿಮಾನ ಬದಲಿಸುವ ಅಗತ್ಯ ಇರುವುದಿಲ್ಲ. ನೇರವಾಗಿ ಅಗತ್ತಿ ವಿಮಾನ ನಿಲ್ದಾಣ ತಲುಪಬಹುದು. ಲಕ್ಷದ್ವೀಪಕ್ಕೆ ನಾನ್​ಸ್ಟಾಪ್ ಇಂಡಿಗೋ ಫ್ಲೈಟ್​ನ ಟಿಕೆಟ್ ಬೆಲೆ ಕೇವಲ 6,999 ರೂ ಮಾತ್ರವೇ ಇದೆ.

ಈ ಮುಂಚೆ ಲಕ್ಷದ್ವೀಪಕ್ಕೆ ವಿಮಾನದ ಮೂಲಕ ಹೋಗಬೇಕೆಂದರೆ ಕನಿಷ್ಠ ಎರಡು ವಿಮಾನಗಳನ್ನಾದರೂ ಹತ್ತಬೇಕಿತ್ತು. ಕೊಚ್ಚಿ ವಿಮಾನ ನಿಲ್ದಾಣಕ್ಕೆ ಹೋಗಿ ಅಲ್ಲಿಂದ ಬೇರೆ ಫ್ಲೈಟ್​ನಲ್ಲಿ ಲಕ್ಷದ್ವೀಪಕ್ಕೆ ಹೋಗಬೇಕಿತ್ತು. ಆದ್ರೆ ಇನ್ನು ಮುಂದೆ ಹಾಗೆ ಮಾಡ್ಬೇಕಾಗಿಲ್ಲ ನೇರವಾಗಿ ಬೆಂಗಳೂರಿನಿಂದ  ಲಕ್ಷದ್ವೀಪಕ್ಕೆ ತಲುಪಬಹುದಾಗಿದೆ.

ಸದ್ಯ ಬೆಂಗಳೂರಿನಿಂದ ಅಲಾಯನ್ಸ್ ಏರ್ ಮತ್ತು ಇಂಡಿಗೋ ಏರ್ಲೈನ್ಸ್ ಸಂಸ್ಥೆಗಳು ಮಾತ್ರವೇ ಲಕ್ಷದ್ವೀಪಕ್ಕೆ ವಿಮಾನ ಹಾರಾಟ ಸೇವೆ ನಡೆಸುತ್ತಿರುವುದು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು