News Karnataka Kannada
Monday, April 29 2024
ದೆಹಲಿ

2026ರಲ್ಲಿ ಬುಲೆಟ್‌ ರೈಲು ಯೋಜನೆ ಮೊದಲ ಹಂತ ಪೂರ್ಣ: ರೈಲ್ವೆ ಸಚಿವ

First phase of bullet train project to be completed by 2026: Railway Minister
Photo Credit : News Kannada

ನವದೆಹಲಿ: ಗುಜರಾತ್‌ನ ಬಿಲಿಮೋರಾ ಮತ್ತು ಸೂರತ್ ನಡುವಿನ 50 ಕಿಮೀ ವ್ಯಾಪ್ತಿಯ ಭಾರತದ ಮೊದಲ ಬುಲೆಟ್ ರೈಲು ಯೋಜನೆ ಆಗಸ್ಟ್ 2026 ರಲ್ಲಿ ಪೂರ್ಣಗೊಳ್ಳಲಿದೆ ಎಂದು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಬುಧವಾರ ಹೇಳಿದ್ದಾರೆ.

ಅಲ್ಲದೆ ರೈಲು ಸುರಕ್ಷತೆ ಬಗ್ಗೆ ಕೂಡ ವಿವರ ನೀಡಿದ್ದು ಕವಚ್ ವ್ಯವಸ್ಥೆಯ ಬಗ್ಗೆ ತಮ್ಮ ಇಲಾಖೆ ಕೈಗೊಂಡಿರುವ ಕ್ರಮಗಳ ಬಗ್ಗೆ ತಿಳಿಸಿದ್ದಾರೆ. ಕಳೆದ ಜೂನ್‌ನಲ್ಲಿ ಒಡಿಶಾದ ಬಾಲಸೋರ್‌ನಲ್ಲಿ ನಡೆದ ಭೀಕರ ರೈಲು ಅಪಘಾತದಲ್ಲಿ 300 ಜನರು ಮೃತಪಟ್ಟಿದ್ದು, ಇಂತಹ ಅಪಘಾತಗಳನ್ನು ತಡೆಯಲು ಸ್ಥಳೀಯವಾಗಿ ಎಚ್ಚರಿಕೆ ವ್ಯವಸ್ಥೆ ಅಭಿವೃದ್ಧಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಆನೆಗಳು ಮತ್ತು ರೈಲುಗಳ ನಡುವಿನ ಡಿಕ್ಕಿ ತಪ್ಪಿಸಲು ಟ್ರ್ಯಾಕ್‌ ಅಭಿವೃದ್ಧಿ ಕುರಿತು ಗಮನಹರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು