News Karnataka Kannada
Sunday, April 28 2024
ದೆಹಲಿ

ಉದ್ಯೋಗದಾತರೇ ಪಿಎಫ್‌ ಖಾತೆಗೆ ಹಣ ಹಾಕಿಲ್ವ: ನಿಮಗಿದೋ ಇಲ್ಲಿದೆ ಎಚ್ಚರಿಕೆ

Employers don't put money in PF account: Here's a warning to you
Photo Credit : News Kannada

ನವದೆಹಲಿ: ಉದ್ಯೋಗಿಗಳಿಗೆ ತಮ್ಮ ಅಗತ್ಯ ಅನಿವಾರ್ಯ ಸೇರಿದಂತೆ ಆಪತ್ತಿಗೆ ಒದಗುವ ಏಕೈಕ ಆಧಾರವೆಂದರೆ ಇಪಿಎಫ್‌. ತಮ್ಮ ಅನಿವಾರ್ಯ ಹಣಕಾಸು ಅಗತ್ಯಗಳಿಗೆ ಹೆಚ್ಚಿನ ಮಂದಿ ಇದೇ ಮೂಲವನ್ನು ಅವಲಂಬಿಸಿರುತ್ತಾರೆ.

ಆದರೆ ಕೆಲ ಉದ್ಯೋಗದಾತ ಸಂಸ್ಥೆಗಳು ಕಾಲಕಾಲಕ್ಕೆ ಇಪಿಎಫ್‌ ವಂತಿಗೆಯನ್ನೇ ನೀಡದೆ ವಂಚಿಸುತ್ತಿವೆ. ಇದರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಇಪಿಎಫ್​ಒ ಮುಂದಾಗಿದೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಇಪಿಎಫ್​ಒ ಮುಂದಿನ ತಿಂಗಳಿಂದ ಸ್ಪೆಷಲ್ ಡ್ರೈವ್ ನಡೆಸಲಿದೆ.

ಡಿಸೆಂಬರ್​ನಿಂದ ಶುರುವಾಗಿ 2024ರ ಫೆಬ್ರವರಿವರೆಗೂ ನಡೆಯುವ ಈ ಡ್ರೈವ್​ನಲ್ಲಿ ಸಂಸ್ಥೆಗಳಿಂದ ಪಿಎಫ್ ಬಾಕಿ ಹಣವನ್ನು ವಸೂಲಿ ಮಾಡಲಾಗುತ್ತದೆ. ನವೆಂಬರ್ 10ರಂದು ಚೆನ್ನೈ ವಿಭಾಗದ ಪಿಐಬಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಈ ಸಂಗತಿಯನ್ನು ತಿಳಿಸಲಾಗಿದೆ.

‘ಇಪಿಎಫ್​ಒಗೆ ಸಬ್​ಸ್ಕ್ರೈಬ್ ಆಗಿರುವ ಎಲ್ಲಾ ಸಂಸ್ಥೆಗಳು ಇಪಿಎಫ್​ಗೆ ನೀಡಬೇಕಿರುವ ಬಾಕಿ ಹಣವನ್ನು ಸಲ್ಲಿಸಬೇಕು ಎಂದು ಈ ಮೂಲಕ ಸಲಹೆ ನೀಡಲಾಗುತ್ತಿದೆ,’ ಎಂದು ಈ ಹೇಳಿಕೆಯಲ್ಲಿ ತಿಳಿಸಲಾಗಿದೆ. ಒಂದು ವೇಳೆ ಇಪಿಎಫ್ ಹಣ ತುಂಬಿಸದಿದ್ದರೆ ಸಂಸ್ಥೆಯ ಚಿರಾಸ್ತಿ, ಚರಾಸ್ತಿ, ಬ್ಯಾಂಕ್ ಖಾತೆ ಇತ್ಯಾದಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ಸಂಸ್ಥೆಯ ಮುಖ್ಯಸ್ಥರನ್ನು ಬಂಧಿಸಲಾಗುತ್ತದೆ ಎಂದೂ ಈ ಹೇಳಿಕೆಯಲ್ಲಿ ಎಚ್ಚರಿಕೆ ನೀಡಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು