News Karnataka Kannada
Friday, May 03 2024
ದೆಹಲಿ

ಬಿಲಿಯನೇರ್ ಗೌತಮ್ ಸಿಂಘಾನಿಯಾ, ನವಾಜ್‌ ವಿಚ್ಛೇದನ

Billionaire Gautam Singhania and Nawaz Sharif divorce
Photo Credit : News Kannada

ನವದೆಹಲಿ: ಬಿಲಿಯನೇರ್ ಗೌತಮ್ ಸಿಂಘಾನಿಯಾ ಸೋಮವಾರ ಪತ್ನಿ ನವಾಜ್‌ ಅವರಿಂದ ಬೇರ್ಪಡುವುದಾಗಿ ಘೋಷಿಸಿದ್ದಾರೆ. 1999ರಲ್ಲಿ ಸಾಲಿಸಿಟರ್ ನಾದರ್ ಮೋದಿಯವರ ಪುತ್ರಿ ನವಾಜ್ ಮೋದಿ ಅವರನ್ನು ಸಿಂಘಾನಿಯಾ ಅವರು ವಿವಾಹವಾಗಿದ್ದರು.

ಈ ಕುರಿತು ಸಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿರುವ ಅವರು ಈ ದೀಪಾವಳಿಯು ಈ ಹಿಂದೆ ಇದ್ದಂತೆ ಇರುವುದಿಲ್ಲ. ನಾನು ಮತ್ತುನವಾಜ್‌ ವಿಭಿನ್ನ ಮಾರ್ಗಗಳನ್ನು ಅನುಸರಿಸುತ್ತೇವೆ ಹೀಗಾಗಿ ಬೇರೆ, ಬೇರೆಯಾಗಲು ಬಯಸಿದ್ದೇವೆ ಎಂದು ಜವಳಿ ಉದ್ಯಮ ರೇಮಂಡ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಿಂಘಾನಿಯಾ ಹೇಳಿದ್ದಾರೆ.

32 ವರ್ಷಗಳ ಕಾಲ ದಂಪತಿಯಾಗಿ ಒಟ್ಟಿಗೆ ಇದ್ದು, ಪೋಷಕರಾಗಿ ಬೆಳೆಯುತ್ತಾ ಮತ್ತು ಯಾವಾಗಲೂ ಪರಸ್ಪರ ಶಕ್ತಿಯಾಗಿ ನಾವು ಬದ್ಧತೆ, ಸಂಕಲ್ಪ, ನಂಬಿಕೆಯೊಂದಿಗೆ ಸಾಗಿದ್ದೇವೆ. ನಮ್ಮ ಜೀವನದಲ್ಲಿ ಎರಡು ಅತ್ಯಂತ ಅಮೂಲ್ಯ ಜೀವಗಳು ಸೇರ್ಪಡೆಗೊಂಡಿವೆ ಎಂದು ಪುತ್ರಿಯರನ್ನು ಕುರಿತು ಹೇಳಿದ್ದಾರೆ. ಆದಾಗ್ಯೂ ಅವರು ತಮ್ಮ ಇಬ್ಬರು ಮಕ್ಕಳ ಪ್ರತ್ಯೇಕತೆ ಮತ್ತು ಪಾಲನೆಯ ವಿವರಗಳನ್ನು ನೀಡಲಿಲ್ಲ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು