ನವದೆಹಲಿ, ಏ.10: ದೆಹಲಿಯ ಗೋಕುಲ್ಪುರಿ ಪ್ರದೇಶದಲ್ಲಿ ವೃದ್ಧ ದಂಪತಿಯನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೃತರನ್ನು ಭಾಗೀರಥಿ ವಿಹಾರ್ ನಿವಾಸಿಗಳಾದ ರಾಧೆ ಶ್ಯಾಮ್ ವರ್ಮಾ (72) ಮತ್ತು ಅವರ ಪತ್ನಿ ವೀಣಾ (68) ಎಂದು ಗುರುತಿಸಲಾಗಿದೆ.
ಕರೋಲ್ ಬಾಗ್ ನ ದೆಹಲಿ ಸರ್ಕಾರಿ ಶಾಲೆಯಲ್ಲಿ ಉಪ ಪ್ರಾಂಶುಪಾಲರಾಗಿ ವರ್ಮಾ ನಿವೃತ್ತರಾಗಿದ್ದರು. ಕುಟುಂಬವು ಕಳೆದ 38 ವರ್ಷಗಳಿಂದ ಈ ಮನೆಯಲ್ಲಿ ವಾಸಿಸುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವರ್ಮಾ ಮತ್ತು ಅವರ ಪತ್ನಿ ವೀಣಾ ಅವರ ನೆಲಮಹಡಿಯ ಮಲಗುವ ಕೋಣೆಯಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ದಂಪತಿಯ ಗಂಟಲು ಸೀಳಲಾಗಿದೆ” ಎಂದು ಅಧಿಕಾರಿ ತಿಳಿಸಿದ್ದಾರೆ. ವೃದ್ಧ ದಂಪತಿಯ ಮಗ ರವಿ ರಟ್ಟನ್ (38) ತನ್ನ ಕುಟುಂಬದೊಂದಿಗೆ ಮೊದಲ ಮಹಡಿಯಲ್ಲಿ ವಾಸಿಸುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.