ನವದೆಹಲಿ: ರಾಜ್ಯದಲ್ಲಿ ಮತ್ತೊಮ್ಮೆ ಕೋವಿಡ್ ಮಹಾಮಾರಿ ಎಲ್ಲೆ ಮೀರುವ ಎಲ್ಲ ಲಕ್ಷಣಗಳು ಕಾಣುತ್ತಿವೆ. ನೆರೆಯ ರಾಜ್ಯ ಕೇರಳದಲ್ಲಿ ಕೊರೊನಾ ವೈರಸ್ ರೂಪಾಂತರಿ ಜೆಎನ್.1 ಪ್ರಕರಣಗಳಲ್ಲಿ ಹೆಚ್ಚಳ ಕಂಡುಬಂದ ಹಿನ್ನೆಲೆ ಕೇಂದ್ರ ಸರ್ಕಾರ ಕೊವಿಡ್ ಗೈಡ್ಲೈನ್ಸ್ ಬಿಡುಗಡೆ ಮಾಡಿದ್ದು, ಕಟ್ಟುನಿಟ್ಟಾಗಿ ಪಾಲಿಸುವಂತೆ ರಾಜ್ಯಗಳಿಗೆ ಸೂಚನೆ ನೀಡಲಾಗಿದೆ. ಮುಂಬರುವ ಹಬ್ಬಗಳ ಮೇಲೆ ನಿಗಾ ವಹಿಸಬೇಕು. ಪ್ರತಿ ಜಿಲ್ಲೆ ಮತ್ತು ನಗರಗಳಲ್ಲಿ ಆರ್ಟಿಪಿಸಿಆರ್, ರ್ಯಾಪಿಡ್ ಆಂಟಿಜೆನ್ ಟೆಸ್ಟ್ ಮಾಡಲು ಸೂಚನೆ ನೀಡಲಾಗಿದೆ.
ಐಎಲ್ಐ, ಸ್ಯಾರಿ ಕೇಸ್ಗಳ ಮೇಲೆ ನಿಗಾ ಇಡಲು ಚಿಕಿತ್ಸೆ ಬೇಕಾದ ಮೂಲ ಸೌಕರ್ಯ ಕ್ರೋಢೀಕರಣ. ಆರ್ಟಿಪಿಸಿಆರ್ ಪಾಸಿಟಿವ್ ಬಂದರೆ ಜೆನೆಮಿಕ್ ಸೀಕ್ವೆನ್ಸ್ಗೆ ಸ್ಯಾಂಪಲ್ ಕಳಿಸಬೇಕು. ಆ ಮೂಲಕ ಕೋವಿಡ್ ರೂಲ್ಸ್ ನಿರ್ಧಾರ ರಾಜ್ಯಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯ ಹೊಣೆ ನೀಡಿದೆ.