ನವದೆಹಲಿ: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರನ್ನು ರಾಕ್ಷಸ ರಾಜ ರಾವಣನ ‘ಹೊಸ ಯುಗದ’ ಅವತಾರವೆಂದು ಚಿತ್ರಿಸುವ ಪೋಸ್ಟರ್ ಅನ್ನು ಎಕ್ಸ್ ನಲ್ಲಿ ಹಂಚಿಕೊಂಡ ನಂತರ ಬಿಜೆಪಿ ಬುಧವಾರ ವಿವಾದವನ್ನು ಹುಟ್ಟುಹಾಕಿದೆ.
ಎಕ್ಸ್ ನಲ್ಲಿ ಪೋಸ್ಟರ್ ಹಂಚಿಕೊಂಡಿರುವ ಬಿಜೆಪಿ, “ಹೊಸ ಯುಗದ ರಾವಣ ಇಲ್ಲಿದ್ದಾನೆ. ಅವನು ದುಷ್ಟ. ಧರ್ಮ ವಿರೋಧಿ. ರಾಮ ವಿರೋಧಿ. ಅವನ ಗುರಿ ಭಾರತವನ್ನು ನಾಶಮಾಡುವುದು ಅಂತ ಬರೆದುಕೊಂಡು ಟ್ವಿಟ್ ಮಾಡಿದ್ದಾರೆ. ಈ ಫೋಟೊ ಸದ್ಯ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಕಾಂಗ್ರೆಸಿಗರು ಕಿಡಿಕಾರಿದ್ದಾರೆ.
The new age Ravan is here. He is Evil. Anti Dharma. Anti Ram. His aim is to destroy Bharat. pic.twitter.com/AwDKxJpDHB
— BJP (@BJP4India) October 5, 2023