News Karnataka Kannada
Monday, April 29 2024
ವಿಶೇಷ

ನುಗ್ಗೆಕಾಯಿ ಬೆಳೆಯ ಬಗ್ಗೆ ಇಲ್ಲಿದೆ ಕೆಲವು ಮಾಹಿತಿ

Here's some information about the drumstick crop
Photo Credit : Pixabay

ಡ್ರಮ್ ಸ್ಟಿಕ್ ಅಥವಾ ಮೊರಿಂಗ ಎಂದು ಕರೆಯಲ್ಪಡುವ ನುಗ್ಗೆಕಾಯಿಯು ಒಂದು ತರಕಾರಿ ಸಸ್ಯವಾಗಿದ್ದು ಅದರ ಬೀಜ ಎಲ್ಲಿ ಮತ್ತು ಹೂಗಳು ಪೋಷಕಾಂಶಗಳಿಂದ ಸಮೃದ್ಧವಾಗಿವೆ. ನುಗ್ಗೆಕಾಯಿ ಮರದ ಸಸ್ಯಶಾಸ್ತ್ರೀಯ ಹೆಸರು ಮೊರಿಂಗೋಲಿಫೆರಾ ಲ್ಯಾಮ್ ಎಂದು ಕರೆಯುತ್ತಾರೆ. ಪ್ರಪಂಚದಾದ್ಯಂತ ಉಷ್ಣವಲಯ ಮತ್ತು ಉಪೋಷ್ಣವಲಯ ಪ್ರದೇಶಗಳಲ್ಲಿ ನುಗ್ಗೆಕಾಯಿಯನ್ನು ಬೆಳೆಸಲಾಗುತ್ತದೆ. ನಿಮಗೂ ವೇಗವಾಗಿ ಬೆಳೆಯುವುದರಿಂದ ಬರನಿರೋಧಕ ಮತ್ತು ದೀರ್ಘಕಾಲಿನ ತರಕಾರಿ ಮರವಾಗಿ ಇವುಗಳನ್ನು ಗುರುತಿಸಲಾಗಿದೆ.

ನುಗ್ಗೆಕಾಯಿ ಮರಗಳು ಚಿಕ್ಕದಾಗಿದ್ದು ಮಧ್ಯಮಗಾತ್ರದ ಸುಮಾರು ಹತ್ತರಿಂದ ಹನ್ನೆರಡು ಮೀಟರ್ ಎತ್ತರ ಬೆಳೆಯುತ್ತದೆ. ಇವುಗಳ ಕಾಂಡವು ತುಂಬಾ ಮೃದುವಾಗಿದ್ದು ಸಣ್ಣ ಸಣ್ಣ ಗಾತ್ರದ ಎಲೆಗಳು ಹಾಗೂ ಬಿಳಿ ಕೆನೆ ಬಣ್ಣದ ಹೂವನ್ನು ಹೊಂದಿರುತ್ತದೆ. ಈ ಮರದ ಹೂ ಬಿಡುವಿಕೆಯು ಭಾರತದಲ್ಲಿ ಪ್ರದೇಶದಿಂದ ಪ್ರದೇಶಕ್ಕೆ ಬದಲಾಗುತ್ತದೆ ಮತ್ತು ಮಣ್ಣು ಮಳೆ ಮತ್ತು ಇತರರ ಪರಿಸರ ಪರಿಸ್ಥಿತಿಗಳಿಂದ ಹೆಚ್ಚು ಪ್ರಭಾವಿತವಾಗಿರುತ್ತದೆ. ದಕ್ಷಿಣ ಭಾರತದಲ್ಲಿ ಜನವರಿಯಿಂದ ಆಗಸ್ಟ್ ನಡುವೆ ವರ್ಷಕ್ಕೊಮ್ಮೆ ಹೂಡುವಿಕೆಯು ಕಂಡುಬಂದರೆ ಮಧ್ಯ ಕೇಳದಲ್ಲಿ ಡಿಸೆಂಬರ್ ನಿಂದ ಜನವರಿಯಲ್ಲಿ ಪ್ರಾರಂಭವಾಗುತ್ತದೆ. ಹೀಗೆ ಸ್ಥಿರವಾದ ತಾಪಮಾನದೊಂದಿಗೆ ಮತ್ತು ಸ್ಥಿರವಾದ ಮಳೆಯೊಂದಿಗೆ ಹೂ ಬಿಡುವಿಕೆಯು ಎರಡು ಬಾರಿ ಅಥವಾ ವರ್ಷವಿಡೀ ಸಂಭವಿಸುವ ಸಾಧ್ಯತೆಗಳಿರುತ್ತದೆ.

ನುಗ್ಗೆಕಾಯಿ ಬೀಜಗಳು ಉತ್ತಮ ಪರಿಮಳವನ್ನು ಹೊಂದಿರುವ ಅತ್ಯಂತ ಜನಪ್ರಿಯ ತರಕಾರಿ ಯಾಗಿದೆ. ಕೇವಲ ನುಗ್ಗೆಕಾಯಿ ಅಷ್ಟೇ ಅಲ್ಲದೆ ನುಗ್ಗೆಕಾಯಿಯ ಎಲೆ, ಹಾಗೂ ಹೂವಿನಿಂದ ವಿವಿಧ ಖಾದ್ಯಗಳನ್ನು ತಯಾರಿಸಲಾಗುತ್ತದೆ. ದಕ್ಷಿಣ ಭಾರತದಲ್ಲಿ ಇವುಗಳ ಬಳಕೆಯನ್ನು ಹೆಚ್ಚಾಗಿ ಸಾಂಬಾರ್ ಪಾಕ ಪದ್ದತಿಯಲ್ಲಿ ಬಳಸುತ್ತಾರೆ.

ಈ ನುಗ್ಗೆಕಾಯಿಯಲ್ಲಿ ಕೆರೋಟಿನ್, ವಿಟಮಿನ್ ಸಿ, ರಂಜಕ ಖನಿಜಗಳಾದ ಪೊಟ್ಯಾಸಿಯಂ, ಮೆಗ್ನೀಷಿಯಂ ಇತ್ಯಾದಿ ಖನಿಜಗಳು ಸಮೃದ್ಧವಾಗಿದೆ.

ನುಗ್ಗೆಕಾಯಿ ಕೃಷಿಗೆ ಹವಾಮಾನ ಮತ್ತು ಮಣ್ಣಿನ ಅವಶ್ಯಕತೆ : ಸಸ್ಯಗಳನ್ನು ವ್ಯಾಪಕವಾದ ಮಣ್ಣಿನಲ್ಲಿ ಬೆಳೆಸಬಹುದು. ಚೆನ್ನಾಗಿ ಬರೆದು ಮಾಡಲಾದ ಮರಳು ಮಿಶ್ರಿತ ಲೋಂ ಅನ್ನು ಇ ನುಗ್ಗೆಕಾಯಿ ಬೆಳೆಗೆ ಸೂಕ್ತವಾಗಿದೆ. ಇದರ ಜೊತೆಗೆ ಕೆಂಪು ಮಣ್ಣುಗಳನ್ನು ಸಹ ಶಿಫಾರಸ್ ಮಾಡಲಾಗುತ್ತದೆ. ಈ ಸಸ್ಯಗಳು ಉಷ್ಣವಲಯ ಮತ್ತು ಉಪೋಷ್ಣವಲಯದ ಹವಾಮಾನ ಪರಿಸ್ಥಿತಿಗಳಲ್ಲಿ ಚೆನ್ನಾಗಿ ಬೆಳೆಯುತ್ತವೆ. ಹಾಗೂ ಹವಾಮಾನದಲ್ಲಿ 40 ಡಿಗ್ರಿ ಸೆಲ್ಷಿಯಸ್ ಗಿಂತ ಹೆಚ್ಚಾಗಿ ಹವಾಮಾನ ಬದಲಾವಣೆಯಾದಾಗ ಹೂವುಗಳು ಉದುರಿ ಹೋಗುವ ಸಾಧ್ಯತೆಗಳಿವೆ. ನುಗ್ಗೆಕಾಯಿ ಗೆ ಸೂಕ್ತವಾಗಿ 25 ಡಿಗ್ರಿ ಸೆಲ್ಸಿಯಸ್ ನಿಂದ 35 ಡಿಗ್ರಿ ಸೆಲ್ಸಿಯಸ್ ವರೆಗಿನ ತಾಪಮಾನದಲ್ಲಿ ಈ ಮರಗಳು ಸಂಪಾಗಿ ಬೆಳೆಯುತ್ತವೆ.

ನುಗ್ಗೆಕಾಯಿ ಬೆಳೆಗೆ ನೀರಾವರಿ : ನುಗ್ಗೆಕಾಯಿ ಸಸ್ಯಗಳು ಆರು ತಿಂಗಳವರೆಗೆ ಬರಸ್ಥಿತಿಯನ್ನು ತಿಳಿದುಕೊಳ್ಳಬಲ್ಲವೂ ಸರಿಯಾದ ಬೆಳವಣಿಗೆಗೆ ಅದಕ್ಕೆ ಕನಿಷ್ಠ ನೀರಾವರಿ ಅಗತ್ಯವಿರುತ್ತದೆ ತುಂಬಾ ಒಣ ಅಥವಾ ತುಂಬ ತೇವದಂತಹ ಮಣ್ಣಿನ ಪರಿಸ್ಥಿತಿಗಳು ಹೂವಿನ ಕುಸಿತಕ್ಕೆ ಕಾರಣವಾಗಬಹುದು ಹೆಚ್ಚಿನ ಇಳುವರಿಗಾಗಿ ಮಣ್ಣಿನ ತೇವಾಂಶವನ್ನು ಅತ್ಯುತ್ತಮವಾಗಿ ನಿರ್ವಹಿಸಬೇಕು. ಮೂರು ತಿಂಗಳವರೆಗೆ ವಾರಕ್ಕೊಮ್ಮೆ ನೀರು ಉಣಿಸಬೇಕು ನಂತರ 10 ರಿಂದ 12 ದಿನಗಳಿಗೊಮ್ಮೆ ಹಾಗೂ ಮಳೆಗಾಲದಲ್ಲಿ ನೀರಾವರಿ ಅಗತ್ಯವಿಲ್ಲದಿರಬಹುದು ಹೂ ಬಿಡುವ ಅವಧಿಯಲ್ಲಿ ಸಾಕಷ್ಟು ಮಣ್ಣಿನ ತೇವಾಂಶವನ್ನು ಕಾಪಾಡಿಕೊಳ್ಳಬೇಕು.

ನುಗ್ಗೆಕಾಯಿ ಆರೋಗ್ಯ ಪ್ರಯೋಜನಗಳು: ನುಗ್ಗೆಕಾಯಿಯಲ್ಲಿ ಹೆಚ್ಚಿನ ಪೌಷ್ಟಿಕಾಂಶಗಳು ಇರುವುದರಿಂದ ಇವು ಮನುಷ್ಯನ ಆರೋಗ್ಯಕ್ಕೆ ತುಂಬಾ ಉಪಯುಕ್ತ. ನುಗ್ಗೆಕಾಯಿಯ ಕೇವಲ ಕಾಯಿ ಮಾತ್ರವಲ್ಲದೆ ಅವುಗಳ ಎಲೆ ಹೂಗಳಲ್ಲಿಯೂ ಹಲವಾರು ಪೋಷಕಾಂಶಗಳಿದ್ದು ಇದು ಮನುಷ್ಯನ ದೇಹವನ್ನು ಅನಾರೋಗ್ಯದಿಂದ ತಪ್ಪಿಸಲು ಸಹಾಯ ಮಾಡುತ್ತದೆ.

# ರಕ್ತದಲ್ಲಿ ಅಧಿಕ ಸಕ್ಕರೆಯನ್ನು ನಿಯಂತ್ರಿಸುತ್ತದೆ

# ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ

# ಉಸಿರಾಟದ ಕಾಯಿಲೆಗಳ ವಿರುದ್ಧ ಹೋರಾಡುತ್ತದೆ

# ದೇಹದಲ್ಲಿ ಮೂಳೆಗಳನ್ನ ಬಲಪಡಿಸುತ್ತದೆ

# ದೇಹದಲ್ಲಿ ರಕ್ತವನ್ನು ಶುದ್ಧೀಕರಿಸುತ್ತದೆ

# ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

# ಚರ್ಮವನ್ನು ಮೊಡವೆಗಳಿಂದ ರಕ್ಷಿಸುತ್ತದೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
25278

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು