News Karnataka Kannada
Sunday, May 19 2024
ದೆಹಲಿ

ನವದೆಹಲಿ: ಚೀನಾ ಮ್ಯಾಪ್‌ ಗೆ 4 ರಾಷ್ಟ್ರಗಳ ವಿರೋಧ

Updated map: Don't glorify problem, stay calm, says China
Photo Credit : IANS

ನವದೆಹಲಿ: ಈ ವಾರ ಚೀನಾ ಬಿಡುಗಡೆ ಮಾಡಿರುವ ನವೀಕೃತ ನಕ್ಷೆಯು ಸ್ಪ್ರಾಟ್ಲಿ ಮತ್ತು ಪ್ಯಾರಾಸೆಲ್ ದ್ವೀಪಗಳ ಮೇಲಿನ ತನ್ನ ಸಾರ್ವಭೌಮತ್ವವನ್ನು ಉಲ್ಲಂಘಿಸುತ್ತದೆ. ಅಲ್ಲದೆ ಜಲಮೂಲಗಳ ಮೇಲಿನ ನ್ಯಾಯವ್ಯಾಪ್ತಿಯನ್ನು ಉಲ್ಲಂಘಿಸುತ್ತದೆ ಎಂದು ವಿಯೆಟ್ನಾಂ ಹೇಳಿದೆ.

ನಕ್ಷೆಯಲ್ಲಿನ ಒಂಬತ್ತು-ಚುಕ್ಕೆಗಳ ರೇಖೆಯನ್ನು ಆಧರಿಸಿದ ಚೀನಾದ ಸಾರ್ವಭೌಮತ್ವ ಮತ್ತು ಕಡಲ ಹಕ್ಕುಗಳು “ಅಮಾನ್ಯ ಎಂದು ವಿಯೆಟ್ನಾಂನ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಫಾಮ್ ಥು ಹ್ಯಾಂಗ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ವಿಯೆಟ್ನಾಂನ ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.

ಈ ಮೊದಲು ಚೀನಾದ ನಿಯಂತ್ರಣದಲ್ಲಿರುವ ಅರುಣಾಚಲ ಪ್ರದೇಶದ ಭಾಗಗಳನ್ನು ತೋರಿಸುವ ನಕ್ಷೆಯ ಕುರಿತು ಭಾರತ ಬಲವಾದ ವಿರೋಧ ವ್ಯಕ್ತಪಡಿಸಿತ್ತು. ಈ ನಡುವೆ ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾದ ವಿಸ್ತಾರ ವಾದವನ್ನು ನಾವು ಒಪ್ಪುವುದಿಲ್ಲ ಎಂದು ಫಿಲಿಪೈನ್ಸ್ ಹೇಳಿದೆ. ಮಲೇಷ್ಯಾ ಮತ್ತು ತೈವಾನ್ ಸರ್ಕಾರಗಳು ಕೂಡ ಬೀಜಿಂಗ್ ನ ವಿಸ್ತರಣಾ ವಾದದ ಅಂಶಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು