ಬೆಂಗಳೂರು: 45 ನಿಮಿಷಗಳ ರಾಪಿಡೋದ ಪ್ರಯಾಣಕ್ಕೆ 3.5ಗಂಟೆಗಳ ವೇಟಿಂಗ್ ಟೈಮ್ ಹಾಕಿರುವ ಟ್ವಿಟರ್ ಪೋಸ್ಟ್ ಒಂದು ಇದೀಗ ವೈರಲ್ ಆಗುತ್ತಿದೆ.
ಬೆಂಗಳೂರಿನ ನಿವಾಸಿಯೊಬ್ಬರು ಈ ಟ್ವೀಟನ್ನು ಮಾಡಿದ್ದು, ಅವರು ನಗರದ ಐಟಿ ಹಬ್ ಕೋರಮಂಗಲದಿಂದ ಅವರ ಮನೆಗೆ ಆಟೋ ರಿಕ್ಷಾದಲ್ಲಿ ಪ್ರಯಾಣಿಸಲು ಬರೋಬ್ಬರಿ 3.5ಗಂಟೆ ಕಾಯಬೇಕು ಎಂದು ರ್ಯಾಪಿಡೋ ಪ್ರಯಾಣಿಕರ ತಂತ್ರಾಂಶ ಹೇಳಿರುವುದನ್ನು ಟ್ವೀಟ್ ಮಾಡಿದ್ದಾರೆ. ಕೋರಮಂಗಲ ಐಟಿ ಹಬ್ ಆಗಿದ್ದು, ಪೀಕ್ ಅವರ್ಗಳಲ್ಲಿ ವಾಹನ ದಟ್ಟಣೆ ಹೆಚ್ಚಿರುತ್ತದೆ. ಈ ವೇಳೆ ಆಟೊ ಬುಕ್ ಮಾಡಿದ್ದ ಟ್ವೀಟ್ದಾರರಿಗೆ ರ್ಯಾಪಿಡೋ ಅಪ್ಲಿಕೇಶನ್ ಕಾಯುವಿಕೆ ಸಮಯವನ್ನು 3.5 ಗಂಟೆ ಎಂದು ತೋರಿಸಿದೆ. ಈ ಟ್ವೀಟ್ ಸದ್ಯ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದು ಬೆಂಗಳೂರಿನ ಅವಸ್ಥೆ ಎಂದು ಕೆಲ ಟ್ವೀಟ್ ಬಳಕೆದಾರರು ವ್ಯಂಗ್ಯವಾಡಿದ್ದಾರೆ. ಕಳೆದ ಮೇ ತಿಂಗಳಲ್ಲಿ, ಟ್ರಾಫಿಕ್ನಲ್ಲಿ ಸಿಲುಕಿಕೊಂಡಿದ್ದ ಬಸ್ ಡ್ರೈವರ್ ಓರ್ವ ಬಸ್ ನಲ್ಲಿ ಊಟ ಮಾಡುತ್ತಿರುವ ವಿಡಿಯೋ ವೈರಲ್ ಆಗಿದ್ದು ಲಕ್ಷಾಂತರ ವೀಕ್ಷಣೆ ಪಡೆದಿತ್ತು.
Rapido wait time getting out of hand. 😭
Gotta wait for more than 3.7 hours for 45 minutes travel. @peakbengaluru
#rapido #Bengaluru #peakbengaluru pic.twitter.com/7xPO3cBkPz
— deyalla (@deyalla_) August 1, 2023